ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜಿಲ್ಲಾಮಟ್ಟದ ಶಿಶು ಸಾಹಿತಿ ಶಿಕ್ಷಕರ ಸಮ್ಮೇಳನ

Lingaraj Badiger
Updated On : 6 Nov 2013, 10:51 am

ಸುರಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಅಜೀಂ ಪ್ರೇಮ್ಜೀ ಫೌಂಡೇಷನ್ ಸಹಯೋಗದಲ್ಲಿ ತಾಲೂಕಿನ ಕೆಂಭಾವಿಯಲ್ಲಿ ನ. 21 ಮತ್ತು 22ರಂದು ಮಕ್ಕಳ ಸಾಹಿತ್ಯ ರಚಿಸಿರುವ ಜಿಲ್ಲಾ ಮಟ್ಟದ ಶಿಕ್ಷಕರ ಸಾಹಿತ್ಯ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ.
ಇಲ್ಲಿಯ ಗರುಡಾದ್ರಿ ಕಲಾ ಮಂದಿರದಲ್ಲಿ ಈ ಕುರಿತಂತೆ ಸಾಶಿಇ, ಎಪಿಎಫ್, ಸಾಹಿತಿಗಳ, ರಾಜಕೀಯ ಮುಖಂಡರ ನೇತೃತ್ವದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೆತ್ತಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ರಾಜಾ ಮದನಗೋಪಾಲನಾಯಕ ಅವರು ಮಾತನಾಡಿ, ಸುರಪುರ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಮಕ್ಕಳ ಸಾಹಿತ್ಯ ರಚಿಸಿರುವ ಶಿಕ್ಷಕರ ಸಮ್ಮೇಳನ ಆಯೋಜಿಸುತ್ತಿರುವುದು ಶ್ಲಾಘನೀಯ. ಈ ಸಮ್ಮೇಳನಕ್ಕೆ ಬೇಕಾಗುವ ಸಹಾಯ- ಸಹಕಾರವನ್ನು ತಾಲೂಕಿನ ಎಲ್ಲಾ ಸಾಹಿತಿಗಳು, ಶಿಕ್ಷಣಾಸಕ್ತರು ನೀಡಬೇಕು ಎಂದು ಮನವಿ ಮಾಡಿದರು.
ಬಾಲಸ್ನೇಹಿ ಮುಖ್ಯಸ್ಥ ರುದ್ರೇಶ ಮಾತನಾಡಿ, ನಮ್ಮ ಸಂಸ್ಥೆ ತಾಲೂಕಿನಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕಾದರೆ ಶಿಕ್ಷಕರ ಶೈಕ್ಷಣಿಕ ಅಭಿವೃದ್ಧಿ ನಿರಂತರವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಮಕ್ಕಳ ಕುರಿತು ಶಿಕ್ಷಕರು ರಚಿಸಿದ ಸಾಹಿತ್ಯವನ್ನು ಕ್ರೋಢೀಕರಿಸಿ ಶಾಲಾ ಮಕ್ಕಳಿಗೆ ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದು ನುಡಿದರು.
ಮಕ್ಕಳಿಗೆ ಸಂಭಂದಿಸಿದಂತೆ ಕಥೆ, ಕವನ, ನಾಟಕ ಮತ್ತು ಪ್ರಬಂಧಗಳನ್ನು ಶಿಕ್ಷಕರು ನ.10ರೊಳಗಾಗಿ ಆಯಾ ವಲಯಗಳ ಶಿಕ್ಷಕರ ಕಲಿಕೆಯ ಕೇಂದ್ರಗಳಲ್ಲಿ ಅಥವಾ ಎಪಿಎಫ್ ಮಾರ್ಗದರ್ಶಕರಲ್ಲಿ ಸಲ್ಲಿಸುವಂತೆ ಎಪಿಎಫ್ನ ಅನ್ವರ್ ಜಮಾದರ್ ತಿಳಿಸಿದ್ದಾರೆ.
ಬಿಇಒ ಎ.ವ್ಹಿ. ಕೆಂಪರಂಗಯ್ಯ, ಕಸಾಪ ತಾಲೂಕು ಅಧ್ಯಕ್ಷ ಶಾಂತಪ್ಪ ಬೂದಿಹಾಳ ಪ್ರಮುಖರಾದ ಶ್ರೀನಿವಾಸ ಜಾಲವಾದಿ, ಬಸವರಾಜ ಜಮದ್ರಖಾನಿ, ಜಿ.ಎಸ್.ಪಾಟೀಲ್, ಕಿಶೋರಚಂದ ಜೈನ, ಸಂಜೀವರಾವ ಕುಲಕರ್ಣಿ, ನಾಲಿಂಗಪ್ಪ ಶಹಪೂರಕರ್, ಬಸಪ್ಪ ಗಲಗಿನ, ಎಸ್.ಎಂ.ಕನಕರೆಡ್ಡಿ, ಜಯಲಲಿತಾ, ಛಾಯಾ ಕುಂಟೋಜಿ, ಪ್ರಕಾಶಚಂದ ಜೈನ, ಶ್ರೀಹರಿರಾವ ಆದವಾನಿ, ಅಜೀಂ ಪ್ರೇಮಜೀ ಫೌಂಡೇಷನ್ನ ಅಡಿವೆಪ್ಪ, ನಾಗರಾಜ ಇದ್ದರು. ದೇವರಾಜ ಕೋಡಬಾಳ್, ಶಂಭಣ್ಣ ಇನ್ನಿತರರಿದ್ದರು.
ಸಮ್ಮೇಳನದ ಉದ್ದೇಶಗಳು: ಯಾದಗಿರಿ ಜಿಲ್ಲೆಯಲ್ಲಿರುವ ಮಕ್ಕಳ ಸಾಹಿತಿಗಳನ್ನ ಗುರುತಿಸುವುದು, ಶಿಕ್ಷಕರು ಬರೆದಿರುವ ಸಾಹಿತ್ಯವನ್ನು ಹೊರತೆಗೆಯುವುದು, ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿಯನ್ನ ಬೆಳೆಸುವುದು, ಬುದ್ದಿಜೀವಿಗಳು ಮತ್ತು ಶಿಕ್ಷಕರನ್ನು ಒಂದೇ ವೇದಿಕೆಯಡಿಯಲ್ಲಿ ತರುವುದು, ಮಕ್ಕಳ ಸಾಹಿತ್ಯ ಸಂಗ್ರಹ, ಸಾಹಿತ್ಯ ಬೋಧನೆಯ ಗುಣಮಟ್ಟವನ್ನು ಹೆಚ್ಚಿಸುವುದು, ಶಿಕ್ಷಕರು ವಿಭಿನ್ನ ಮಟ್ಟದಲ್ಲಿ ಸಾಹಿತ್ಯವನ್ನು ಹೇಗೆ ಗ್ರಹಿಸಬಹುದು ಎಂಬುದನ್ನು ತಿಳಿಯುವುದಾಗಿದೆ. ಅಲ್ಲದೇ ಸ್ಥಳೀಯ ಸಾಹಿತ್ಯ ಕ್ರೂಢೀಕರಣ, ಮಕ್ಕಳೇ ಸಾಹಿತ್ಯ ರಚಿಸುವುದು, ಸಂಗ್ರಹಿಸಿದ ಕವನಗಳ ಪ್ರಕಟಣೆ, ಸಾಹಿತ್ಯ ಬರವಣಿಗೆಗೆ ಪ್ರೋತ್ಸಾಹ, ಮಗುವಿನ ಬೆಳವಣಿಗೆಗೆ ಅನುಗುಣವಾಗಿ ಸಾಹಿತ್ಯ ರಚನೆ, ಮಕ್ಕಳು ತಮ್ಮ ಪ್ರತಿಭೆಯನ್ನ ಹೊರ ಹಾಕಲು ವೇದಿಕೆ ಕಲ್ಪಿಸಿ ಕೊಡುವುದು. ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ವೇದಿಕೆ ಸೃಷ್ಠಿ, ಮಕ್ಕಳ ದಿನಾಚಾರಣೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement