'ಬೆಳಕು' ಕಂಡ ಕುಷ್ಠರೋಗಿಗಳು
ಯಾದಗಿರಿ: ನಗರದ ಕುಷ್ಠರೋಗಿಗಳ ಕಾಲನಿಯಲ್ಲಿ ದಿ.ಕುಲ್ಲೂರ ಮಲ್ಲಪ್ಪ ಅವರ ಅಭಿಮಾನಿಗಳ ಬಳಗದ ವತಿಯಿಂದ ಕುಷ್ಠರೋಗಿಗಳ ಕಾಲನಿಯಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮುಖಂಡ ಡಾ.ಶರಣಭೂಪಾಲರೆಡ್ಡಿ ಮಾತನಾಡಿ, ಕುಷ್ಠರೋಗಿಗಳನ್ನು ಕಟ್ಟಕಡೆಯ ವ್ಯಕ್ತಿಗಳಿಂತಲೂ ಕಡೆಯಾಗಿ ನೋಡುವ ಇಂದಿನ ದಿನಗಳಲ್ಲಿ ಕುಲ್ಲೂರ ಮಲ್ಲನವರ ಅಭಿಮಾನಿಗಳು ಕುಷ್ಠರೋಗಿಳ ಕಾಲನಿಗೆ ಬಂದು ದೀಪಾವಳಿ ಆಚರಿಸಿದ್ದಾರೆ. ಇಲ್ಲಿನವರಲ್ಲಿ ಹೊಸ ಉತ್ಸಾಹ ಮೂಡಿಸಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.
ಈ ಸಂದರ್ಭ ಅಭಿಮಾನಿಗಳಾದ ಡಾ. ಎನ್.ವಾರದ್ ಕುಷ್ಠರೋಗಿಗಳ ಕಾಲನಿಗೆ ರಸ್ತೆ ಇಲ್ಲದಿರುವದನ್ನು ಮನಗಂಡು ತಕ್ಷಣ ಸಂಬಧಪಟ್ಟವರು ಶ್ರಮಿಸಬೇಂದು ಆಗ್ರಹಿಸಿದರು. ಕೃಷ್ಣ ಸುಬೇದಾರ, ಆನಂದ ಸೌದಿ, ಹಾಸ್ಯ ಕಲಾವಿದರಾದ ಬಸವರಾಜ ಮಹಾಮನಿ, ಮೇಘನಾಥ ಬೆಳ್ಳಿ ಇದ್ದರು. ಪತ್ರಕರ್ತ ಇಂದುಧರ ಇದ್ದರು.