ಮದ್ಯದಂಗಡಿ ವಿರುದ್ಧ ಕ್ರಮಕ್ಕೆ ಆಗ್ರಹ
ಶಹಾಪುರ: ಪಟ್ಟಣದಲ್ಲಿ ಬಾರ್ ಮತ್ತು ವೈನ್ಶಾಪ್ಗಳ ನವೀಕರಣ ಕಾನೂನು ಬಾಹಿರವಾಗಿ ಮಾಡಿದ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು ಇದನ್ನು ಜಿಲ್ಲಾಧಿಕಾರಿ ತಕ್ಷಣ ತಡೆಯಬೇಕೆಂದು ಜಯ ಕರ್ನಾಟಕ ಸಂಘಟನೆ ಆಗ್ರಹಿಸಿದೆ.
ಕಾನೂನು ಬಾಹಿರವಾಗಿ ನವೀಕರಣ ಮಾಡಿದ ಅಬಕಾರಿ ಅಧಿಕಾರಿ ಅವರು ಈಗಾಗಲೇ ಅಮಾನತುಗೊಂಡಿದ್ದಾರೆ. ಆದರೆ ನವೀಕರಣ ಮಾಡಿರುವ ಬಾರ್ ಮತ್ತು ವೈನ್ಶಾಪ್ಗಳು ಕಾನೂನು ಬಾಹಿರವಾಗಿ ಮದ್ಯಮಾರಾಟ ಮಾಡುತ್ತಿವೆ. ಹಾಗಾಗಿ ಬಾರ್ ಮತ್ತು ವೈನ್ಶಾಪ್ಗಳು ಪರವಾನಗಿ ಇಲ್ಲದೆ ಮದ್ಯಮಾರಾಟ ಮಾಡುತ್ತಿರುವುದು ಅಪರಾಧ.
ಕೂಡಲೇ ಜಿಲ್ಲಾಧಿಕಾರಿ ಅಬಕಾರಿ ಜಿಲ್ಲಾಧಿಕಾರಿ ಮೇಲೆ ಯಾವ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರೇ ಅದೇ ರೀತಿಯಾಗಿ ಪಟ್ಟಣದ ಬಾರ್ ಮತ್ತು ವೈನ್ಶಾಪುಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಜಯ ಕರ್ನಾಟಕ ತಾಲೂಕು ಘಟಕದಿಂದ ಉಪ ಅಬಕಾರಿ ಕಚೇರಿಗೆ ಬೀಗ ಮುದ್ರೆ ಮಾಡಿ ಉಗ್ರವಾದ ಪ್ರತಿಭಟಣೆಯನ್ನು ಮಾಡಬೇಕಾಗುತ್ತದೆ ಎಂದು ಅಬ್ದುಲ್ ಸಿ. ಹಾದಿಮನಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ತೇಜರಾಜ ರಾಠೋಡ, ರಾಜ್ಯ ಸಂಚಾಲಕ ವೆಂಕಟೇಶ ತುಳೇರ, ತಾಲೂಕು ಗೌರವಾಧ್ಯಕ್ಷ ಸದಾಶಿವ ಆರ್. ಮುದೇಳ, ಸತೀಶ ಪಂಚಬಾವಿ, ರವೀಂದ್ರಕುಮಾರ ನಾಲವಾರ, ಕೃಷ್ಣ ಗಂವಾರ, ಭೀಮರಾಯ ಶೆಟ್ಟಿಗೆರಾ, ಮಲ್ಲಿಕಾರ್ಜುನ ಶಿರವಾಳ, ಹಣಮಂತನಾಯಕ ಹಳಿಸಗರ, ಮಾನಪ್ಪ ದೊರಿ ಶಿರವಾಳ, ಧರ್ಮಣ್ಣ ಚಲವಾದಿ, ಮೌನೇಶ ಹಳಿಸಗರ, ಚಂದ್ರು ಮನಗಾರ, ಮಂಜು, ಆಶೀಫ್, ಮಹಾಂತೇಶ ಮೂಡಬೂಳ ಇದ್ದರು.
'ಮೋದಿ ಬೂಟಾಟಿಕೆ ನಡೆಯದು'
ಯಾದಗಿರಿ: ನರೇಂದ್ರ ಮೋದಿ ಒಬ್ಬ ಬೂಟಾಟಿಕೆಯ ಮನುಷ್ಯ. ಅವರ ಯಾವ ತಂತ್ರವೂ ಕಾಂಗ್ರೆಸ್ ಪಕ್ಷದ ಮುಂದೆ ನಡೆಯುವುದಿಲ್ಲ ಎಂದು ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಲೋಕಸಭೆ ಚುನಾವಣೆ ನಿಮಿತ್ತ ಹಮ್ಮಿಕೊಂಡ ಗ್ರಾಮೀಣ, ತಾಲೂಕಾ ಹಾಗೂ ಜಿಲ್ಲಾಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ತನ್ನ ನೆಲೆ ಕಂಡುಕೊಳ್ಳಲು ಒಬ್ಬ ಬೂಟಾಟಿಕೆ ಮಾಡುವ ಮನುಷ್ಯ ಮೋದಿಯನ್ನು ಈ ದೇಶದ ಪ್ರಧಾನಮಂತ್ರಿ ಮಾಡುವ ಕನಸು ಕಾಣುತ್ತಿದೆ. ಆದರೆ ಜನಪರ ಕಾಳಜಿಯುಳ್ಳ ಕಾಂಗ್ರೆಸ್ ಪಕ್ಷದ ಮುಂದೆ ಅವರ ಯಾವ ಆಟವೂ ನಡೆಯುವುದಿಲ್ಲ. ಎಂದರು. ಸಭೆಯಲ್ಲಿ ಪ್ರಮುಖರಾದ ಭೀಮರೆಡ್ಡಿ ಶೆಟ್ಟಿಹಳ್ಳಿ, ಚಂದ್ರಶೇಖರ ಅರಬೋಳ, ಶರಣಪ್ಪಗೌಡ ಮಲ್ಹಾರ, ಶರಣಗೌಡ ಅರಿಕೇರಿ, ಸುರೇಶ ಜೈನ, ಮರೆಪ್ಪ ಬಿಳ್ಹಾರ, ಅಯ್ಯಣ್ಣ ಠಾಣಗುಂದಿ, ಶಿವರಾಜ ಜಕಾತಿ, ಶರಣಬಸವ ಕುರುಕುಂದಿ, ಹಣಮಂತರಾಯ ಬಿರನೂರ, ರಾಹುಲ ಅರಿಕೇರಿ ಇತರರು ಇದ್ದರು.