ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹೆಂಡತಿಯನ್ನೇ ತುಂಡು ತುಂಡಾಗಿ ಕತ್ತರಿಸಿದ ಪಾಪಿ!

Lingaraj Badiger
Updated On : 6 Nov 2013, 10:54 am

ಕನ್ನಡಪ್ರಭ ವಾರ್ತೆ, ಅಫಜಲ್ಪುರ, ನ.5
ಪತ್ನಿಯ ಶೀಲ ಶಂಕಿಸಿದ ಪತಿ ಮಹರಾಯನೊಬ್ಬ ಆಕೆಯನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿ ಸುಟ್ಟು ಹಾಕಿರುವ ಅಮಾನುಷ ಘಟನೆ ತಾಲೂಕಿನ ಹೊರವಲಯದ ದೇಸಾಯಿ ಕಲ್ಲೂರ ರಸ್ತೆಯ ಹೊಲದಲ್ಲಿ ನಡೆದಿದೆ.
 ಪಟ್ಟಣದ ದೇಸಾಯಿ ಗಲ್ಲಿ ನಿವಾಸಿ ಐರಾವತಿ (55) ಪತಿ ಸಿದ್ದಣ್ಣ ತಂಡೆ ವೀರಸಂಗಪ್ಪ ದೇಸಾಯಿ (60) ಎಂಬವನಿಂದ ಹತ್ಯೆಗೀಡಾದ ನತದೃಷ್ಟೆ. 35 ವರ್ಷಗಳ ದಾಂಪತ್ಯ ನಡೆಸಿದ್ದರು. ಪತ್ನಿಯನ್ನು ಕೊಂದ ಸಿದ್ದಣ್ಣ ಹೊಲದ ತಿಪ್ಪೆಗುಂಡಿಯಲ್ಲಿ ಹಾಕಿ ಸುಟ್ಟಿದ್ದಾರೆ. ಇವರಿಗೆ ಮಕ್ಕಳಿರಲಿಲ್ಲ. ನ.1ರಂದು ಪತ್ನಿಯನ್ನು ಕರೆದುಕೊಂಡು ಹೊಲಕ್ಕೆ ಹೋಗಿದ್ದಾಗ ಸಿದ್ದಣ್ಣ ಆಕೆಯೊಂದಿಗೆ ಜಗಳವಾಡಿದ್ದ.
  ಹೊಲಕ್ಕೆ ಹೋದವರು 4 ದಿನವಾದರೂ ಮನೆಗೆ ಹಿಂದಿರುಗದ ಕಾರಣ ಗ್ರಾಮಸ್ಥರು ಸಂಶಯಗೊಂಡರು. ಅಲ್ಲದೇ ಈ ಬಗ್ಗೆ ಪರಿಶೀಲನೆಗಿಳಿದಾಗ ಹೊಲದಲ್ಲಿ ಮಹಿಳೆ ಶವವೊಂದು ಕಂಡುಬಂದಿತು. ಆಗ ಪ್ರಕರಣ ಬಯಲಾಗಿದೆ. ತಿಪ್ಪೆ ಗುಂಡಿಯಲ್ಲಿ ಮಹಿಳೆ ಧರಿಸಿದ್ದ ಬಳೆ, ಕಾಲುಂಗರ, ಲಿಂಗದಕಾಯಿ, ತಾಯತ ಮತ್ತು ಸುಟ್ಟು ಕರಕಲಾದ ಮೂಳೆಗಳು ದೊರೆತಿವೆ. ಹಂತಕ ಸಿದ್ದಣ್ಣ ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಫಜಲ್ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement