ಅಂಗವಿಕಲರಿಗೆ ವಾಹನ ವಿತರಣೆ
ಗುಲ್ಬರ್ಗ: ಮಹಾಗಾಂವ ಗ್ರಾಮದಲ್ಲಿ ಇಬ್ಬರು ಅಂಗವಿಕಲರಾದ ನಾಗರಾಜ ಮತ್ತು ಶಕೀಲ್ ತಂದೆ ಮಗದ ಮಸಾಬ್ ಅವರಿಗೆ ತ್ರೀಚಕ್ರ ವಾಹನ ವಿತರಿಸಲಾಯಿತು. ಕಳೆದ ವರ್ಷ ಮಹಾಗಾಂವ ಗ್ರಾಮದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಆಗಿನ ಸಚಿವ ರೇವು ನಾಯಕ ಬೆಳಮಗಿ ಅವರ 2012-13ನೇ ಸಾಲಿನ ಶಾಸಕರ ಅನುದಾನದಡಿಯಲ್ಲಿ ಮಂಜೂರಾಗಿದ್ದ ತ್ರಿಚಕ್ರ ವಾಹನಗಳನ್ನು ಶಾಸಕ ಜಿ. ರಾಮಕೃಷ್ಣ ಅವರು ಅಂಗವಿಕಲರಿಗೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಚನ್ನವೀರಪ್ಪ ಸಲಗರ, ತಾಪಂ ಸದಸ್ಯೆ ಸೇವಂತಾಬಾಯಿ, ಕಾಂಗ್ರೆಸ್ ಮುಖಂಡ ವೈಜನಾಥ ತಡಕಲ್, ತಹಸೀಲ್ದಾರ್ ಪ್ರಕಾಶ ಚಿಂಚೋಳಿಕರ್, ಬಸವರಾಜ ಬೆಣ್ಣೆ ಶಿರೂರ, ಡಾ. ಸಿಖಂದರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಇತರರು ಇದ್ದರು.