11 ರಂದು ರಾಷ್ಟ್ರೀಯ ಕಾನೂನು ಸೇವೆಗೆಳ ದಿನಾಚರಣೆ
ಸುರಪುರ: ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಆವರಣದಲ್ಲಿ 11ರಂದು ಬೆಳಗ್ಗೆ 9ಕ್ಕೆ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿಯ ಜೆಎಂಎಫ್ಸಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಕಾರಬಾರಿ ರವೀಂದ್ರ ಕಾರ್ಯಕ್ರಮ ಉದ್ಘಾಟಿಸುವರು. ವಕೀಲರ ಸಂಘದ ಅಧ್ಯಕ್ಷ ವಿ.ಸಿ.ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಿರಿಯ ಶ್ರೇಣಿ ನ್ಯಾಯಾಧೀಶರಾದ ಶಶಿಧರಗೌಡ, ವಕೀಲರ ಸಂಘದ ಉಪಾಧ್ಯಕ್ಷ ಮೊಹ್ಮದ್ ಹುಸೇನ್, ವಕೀಲರಾದ ಎಸ್.ಎಂ. ಕನಕರೆಡ್ಡಿ, ಅರವಿಂದ ಕುಮಾರ, ಅಪ್ಪಾಸಾಹೇಬ್ ಪಾಟೀಲ್, ಪಿಎಸ್ಐ ಹಣಮಂತ್ರಾಯ ಪಟ್ಟೇದ್ ಮುಖ್ಯ ಅತಿಥಿಗಳು. ರಾಷ್ಟ್ರೀಯ ಕಾನೂನು ಸೇವೆ ಕುರಿತು ವಕೀಲ ವಿ.ಎಸ್. ಬೈಚಬಾಳ್ ಉಪನ್ಯಾಸ ನೀಡಲಿದ್ದಾರೆಂದು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಬನ್ನಾಳೆ ತಿಳಿಸಿದ್ದಾರೆ.