ಖಾತ್ರಿ ಇರುವಾಗ ದಲ್ಲಾಳಿಗಳ ಹಂಗೇಕೆ?
ಕನ್ನಡಪ್ರಭ ವಾರ್ತೆ, ಕೆಂಭಾವಿ, ನ.8
ಉದ್ಯೋಗ ಖಾತ್ರಿ ಬಂದು ಐದು ವರ್ಷಕ್ಕಿಂತ ಹೆಚ್ಚಾಗಿದೆ. ಆದರೆ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಮಾತ್ರ ಕಾಣುತ್ತಿಲ್ಲ. ಇದೀಗ ರೈತರಿಗಾಗಿ ಸರ್ಕಾರ ರೂಪಿಸಿರುವ ಯೋಜನೆಯಡಿ ಚಾಲನೆ ನೀಡಿದ್ದು, ಇದು ರೈತರಿಗೆ ನೇರವಾಗಿ ಹಣ ದೊರಕಲಿದೆ. ಇದರಿಂದ ಯಾವುದೇ ಮೋಸವಿಲ್ಲ, ದಲ್ಲಾಳಿಗಳ ಮೊರೆ ಹೋಗಬೇಡಿ ಎಂದು ಶಾಸಕ ಗುರು ಪಾಟೀಲ ಹೇಳಿದರು.
ಅವರು ಪಟ್ಟಣದಲ್ಲಿ ನಡೆದ ಜಿಲ್ಲಾಮಟ್ಟದ ಅಭಿಯಾನ ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿ, ನೇರವಾಗಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ತಮ್ಮ ತಮ್ಮ ಜಮೀನುಗಳಿಗೆ ಬೇಕಾಗುವ ಕೆಲಸಗಳನ್ನು ಮಾಡಿಸಿಕೊಳ್ಳಿ. ನೇರವಾಗಿ ಈ ಹಣ ಕುಟುಂಬದವರು ಪಡೆಯಬಹುದು. ಇದು ಉತ್ತಮ ಯೋಜನೆಯಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು.
ತಾರತಮ್ಯ ಬೇಡ: ಸಾಮೂಹಿಕ ಯೋಜನೆಯಡಿ ಕೆರೆಗಳಿಗೆ ನೀರು ತುಂಬುವ ಕಾರ್ಯ ನಡೆಯಲಿದ್ದು, ಇದರಿಂದ ಈ ಭಾಗದ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಅನುಕೂಲವಾಗಲಿದೆ. ಸಂಬಂಧಪಟ್ಟ ಅಧಿಕಾರಿಗಳು ತಾರತಮ್ಯ ಮಾಡದೇ ಪ್ರತಿ ರೈತರಿಗೂ ಈ ಯೋಜನೆ ತಟ್ಟಿದಾಗ ಮಾತ್ರ ಈ ಕಾರ್ಯ ಸಫಲವಾಗುತ್ತದೆ ಎಂಬ ಉದ್ದೇಶದಿಂದ ಸರಕಾರ ಜಿಲ್ಲಾಡಳಿತವನ್ನು ಹೋಬಳಿ ಮಟ್ಟದವರೆಗೆ ಕಳುಹಿಸಿ ಸಾರ್ವಜನಿಕರಿಗೆ ಯೋಜನೆಯ ಮಾಹಿತಿ ಮತ್ತು ಸರಕಾರದಿಂದ ಸಿಗುವ ಸವಲತ್ತುಗಳನ್ನು ತಿಳಿಸಲು ಗ್ರಾಮಗಳವರೆಗೆ ಅಧಿಕಾರಿಗಳು ಬರುತ್ತಿದ್ದಾರೆ.
ಈ ಯೋಜನೆ ಸದುಪಯೋಗ ಪಡಿಸಿಕೊಂಡು ಆಥರ್ಕ ಮಟ್ಟವನ್ನು ಸುದಾರಿಸಿ ಕಾಮರ್ಕರು ವಲಸೆ ಹೋಗುವುದನ್ನು ತಡೆಗಟ್ಟಬೇಕು. ಈ ಯೋಜನೆ ಬಗ್ಗೆ ಪ್ರತಿ ಕುಟುಂಬಕ್ಕೂ ಅರಿವು ಮೂಡಿಸಬೇಕು. ನನಗೆ ಇಡೀ ಕ್ಷೇತ್ರಕ್ಕೆ ಎರಡು ಕೋಟಿ ರುಪಾಯಿ ಅನುದಾನವಿದೆ. ಆದರೆ ಪ್ರತಿ ಪಂಚಾಯತ್ ಅಧ್ಯಕ್ಷ ತಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಜನರ ಬೇಡಿಕೆಯಂತೆ ಕೆಲಸ ಮಾಡುವಷ್ಟು ಹಣ ತಮಗೆ ಇದೆ ಎಂದರು.
ಹಣ ವಿತರಣೆ: ಜಿಪಂ ಕಾರ್ಯ ನಿರ್ವಾಹಕ ಅಧಿಕಾರಿ ಜಿಲಾನಿ ಪ್ರಾಸ್ತಾವಿಕ ಮಾತನಾಡಿ ಸಣ್ಣ ಮತ್ತು ಅತೀ ಸಣ್ಣ ರೈತರು ತಮ್ಮ ಜಮೀನಿನಲ್ಲಿ ಯಾವುದೇ ಕಾಮಗಾರಿ ಮಾಡಬೇಕಾದರೆ ಸದ್ಯ ಸರ್ಕಾರವೇ ಹಣ ನೀಡಲಿದೆ. ಕೃಷಿಹೊಂಡ, ನೆಲ ಸಮತಟ್ಟ, ಜಾನುವಾರ ಕೊಟ್ಟಿಗೆ ವಯಕ್ತಿ ಶೌಚಾಲಯ ಇಂಗುಗುಂಡಿ ನೀರಾವರಿ ಸೌಲಭ್ಯಕ್ಕಾಗಿ ಭಾವಿ ತೋಡುವುದು ತೋಟಗಾರಿಕೆ ಬೆಳೆಗಳನ್ನು ಅಭಿವೃದ್ಧಿ ಪಡಿಸುವುದು, ನಮ್ಮಹೊಲ ನಮ್ಮ ದಾರಿ ರಾಶಿಖಣಗಳು ಕೆರೆಗಳು ಸ್ಮಶಾನ ಅಭಿವೃದ್ಧಿ ಆಟದ ಮೈದಾನ ಮತ್ತು ಬೋಧ ನಿರ್ಮಾಣಕ್ಕಾಗಿ ನೇರವಾಗಿ ಹಣ ನೀಡುತ್ತಿದೆ.
ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದು ಕೇವಲ ಒಂದು ವರ್ಗದವರಿಗೆ ಮಾತ್ರವಲ್ಲ, ಸಣ್ಣ ಮತ್ತು ಅತೀ ಸಣ್ಣ ರೈತರು ಯಾವದೇ ಸಮುದಾಯದವರಾಗಿದ್ದರೂ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಸಿದ್ಧನಗೌಡ ಪೋಲಿಸ ಪಾಟೀಲ, ನಾಗನಗೌಡ ಸುಬೇದಾರ , ಮಲ್ಲಣ್ಣ ಮೇಟಿ, ಗ್ರಾಪಂ ಅಧ್ಯಕ್ಷೆ ಪದ್ಮಾವತಿ ದೇವರಮನಿ, ಶಂಕರಗೌಡ, ಈಶ್ವರ ಬಡಿಗೇರ, ನಂದರಡ್ಡೆಪ್ಪ ಪಾಟೀಲ, ಜಿ ಪಂ ಉಪ ಕಾರ್ಯದಶರ್ ವೈ.ಎಂ. ಮಹಮ್ಮದ್ ಯುಸುಫ್ ಮುಖ್ಯ ಯೋಜನಾಧಿಕಾರಿ ಬಸವರಾಜ ಯೋಜನಾ ನಿರ್ದೇಶಕ ಶಂಕರ ಗೊಂಡಾ, ಉಪನಿರ್ದೇಶಕ ಪಶುಪಾಲನಾ ಇಲಾಖೆ ಡಾ. ಎಂ.ಟಿ. ಮಂಜುನಾಥ ಸಿದ್ದಾರೆಡ್ಡಿ ಎಂಆರ್ ಖಾಂದಾರೆ, ಬಸಯ್ಯ ಹಿರೇಮಠ ಸೇರಿದಂತೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.