ನಮೋ ರ್ಯಾಲಿ: ಕೂಪನ್ ಮಾರಾಟ
ಯಾದಗಿರಿ: ನಗರ ಯುವಮೋರ್ಚ ಘಟಕ ವತಿಯಿಂದ ಇಂದು ಯಾದಗಿರಿ ನಗರದಲ್ಲಿ ಗಾಂಧಿ ವೃತ್ತದ ಮುಖ್ಯರಸ್ತೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ನವೆಂಬರ್ 17ರ ಭಾರತ ಗೆಲ್ಲಿಸಿ ರ್ಯಾಲಿಯ ಪ್ರವೇಶ ಕೂಪನ್ಗಳನ್ನು 10 ಶುಲ್ಕ ಕೊಟ್ಟು ಸಾರ್ವಜನಿಕರು ಸ್ವಇಚ್ಚೆಯಿಂದ ತೆಗೆದುಕೊಂಡರು. ರಾಜ್ಯ ಕಾರ್ಯಲಯ ಕಾರ್ಯದರ್ಶಿಗಳಾದ ರವೀಂದ್ರರೆಡ್ಡಿ ನೇತೃತ್ವವಹಿಸಿದರು.
ಈ ಸಮಯದಲ್ಲಿ ಜಿಲ್ಲಾ ಯುವಮೋರ್ಚ ಅಧ್ಯಕ್ಷರಾದ ಸುರೇಶ ಅಂಬಿಗೇರ ಮಾತನಾಡಿ, ರಾಜ್ಯದ್ಯಂತ ಜನರು ಬಹಳ ಉತ್ಸುಕರಾಗಿ ಮೋದಿ ರ್ಯಾಲಿಯ ಈ ಕೂಪನ್ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ನಿಚ್ಚಳ ಬಹುಮತ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. ಈ ಸಂದರ್ಭದಲ್ಲಿ ಅಯ್ಯಣ್ಣಗೌಡ ಅಳ್ಳೋಳ್ಳಿ, ಮಂಜುನಾಥ ಜಡಿ, ಸಾಬಣ್ಣ ಮಡಿವಾಳ, ಸಾಬು ಚಂಡ್ರಿಕಿ, ದೇವು ನಾಯಕ, ಶರಣು ಎಲ್ಹೇರಿ, ಶರಣು ಆಶನಾಳ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ಮಾಗನೂರ ನಗರಾಧ್ಯಕ್ಷರಾದ ಹಣಮಂತ ಇಟಗಿ, ವೆಂಕಟರೆಡ್ಡಿ ಅಬ್ಬೇತುಮಕುರ, ಚನ್ನಯ್ಯ ಮಾಳಿಕೇರಿ ಶ್ರೀನಿವಾಸ ಇಟೇಕರ್, ಕಲ್ಯಾಣಕುಮಾರ ಬಡಿಗೇರ, ದೇವಿಂದ್ರಪ್ಪ ಯರಗೋಳ ಇತರರು ಕ್ರಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.