ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮೋದಿ ರ್ಯಾಲಿಗೆ 2 ಸಾವಿರ ಕಾರ್ಯಕರ್ತರು

Vishwanath S
Updated On : 9 Nov 2013, 12:18 pm

ಚಿತ್ತಾಪುರ: ನ.17 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾರತ ಗೆಲ್ಲಿಸಿ ಸಮಾವೇಶಕ್ಕೆ ಚಿತ್ತಾಪುರ ಮತಕ್ಷೇತ್ರದಿಂದ 2 ಸಾವಿರ ಕಾರ್ಯಕರ್ತರು ತೆರಳಲಿದ್ದಾರೆಂದು ತಾಲೂಕು ಅಧ್ಯಕ್ಷ ಶಶಿಕಾಂತ ಪಾಟೀಲ್ ಬೆಳಗುಂಪಾ ಹೇಳಿದರು.
ಪಕ್ಷದ ಕಚೇರಿಯಲ್ಲಿ ಸಮಾವೇಶಕ್ಕೆ ತೆರಳುವ ಕೂಪನ್ ವಿತರಣೆಗೆ ಚಾಲನೆ ನೀಡಿ, ಮತಕ್ಷೇತ್ರದ ಪ್ರತಿಯೊಂದು ಬೂತ್, ಶಕ್ತಿ ಕೇಂದ್ರ, ವಿವಿಧ ಮೋರ್ಚಾಗಳು ಹಾಗೂ ಮಹಿಳಾ ಮೋರ್ಚಾಗಳ ಮಟ್ಟದ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಡಲು ಕೂಪನ್ ನೀಡುತ್ತಿದ್ದು, ಸಮಾವೇಶಕ್ಕೆ ತೆರಳಲು 10 ನೀಡಿ ಕೂಪನ್ ಪಡೆಯಬೇಕೆಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ತಳವಾರ ಮಾತನಾಡಿ, ಮತಕ್ಷೇತ್ರದ ಎಲ್ಲ ಕಾರ್ಯಕರ್ತರು ತಮ್ಮ ವೈಯಕ್ತಿಕ ಕಾರ್ಯಕ್ರಮದಂತೆ ಆಸಕ್ತಿ ವಹಿಸಿ ಸಮಾವೇಶದ ಜವಾಬ್ದಾರಿ ಹೊಂದಿ ಕೆಲಸ ಮಾಡೋಣ ಎಂದು ಹೇಳಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಡಾ. ಮಹೇಂದ್ರ ಕೋರಿ ಮಾತನಾಡಿದರು. ತಾಲೂಕು ಯುವ ಮೋರ್ಚಾದ ಅಧ್ಯಕ್ಷ ತಮ್ಮಣ್ಣ ಡಿಗ್ಗಿ, ನಗರ ಅಧ್ಯಕ್ಷ ಸುರೇಶ ಬೆನಕನಳ್ಳಿ, ಎಸ್.ಸಿ. ಘಟಕ ಅಧ್ಯಕ್ಷ ಭೀಮರಾಯ ಕರದಾಳ, ಪುರಸಭೆ ಸದಸ್ಯ ದಶರಥ ದೊಡ್ಮನಿ, ಮುಖಂಡರಾದ ಪರಮೇಶ್ವರ ಕಲಬುರ್ಗಿ, ಶರಣಗೌಡ ಸಂಕನೂರ, ರಾಜು ಕುಲ್ಕರ್ಣಿ, ರವಿಂದ್ರ ಹಡಪದ, ವಿಷ್ಣು ಜಿತುರೆ, ಯಂಕಾರೆಡ್ಡಿ ಪಾಟೀಲ್, ವಿಷ್ಣು ಲೋಮಟೆ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಬಾಲಾಜಿ ಬುರುಬುರೆ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಹೂಗಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement