ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

20ರಂದು ಕನಕ ಜಯಂತಿ; ಹಾಜರಿ ಕಡ್ಡಾಯ-ತಹಸೀಲ್ದಾರ್ ಮಲ್ಲೇಶ

Vishwanath S
Updated On : 10 Nov 2013, 12:32 pm

ಚಿತ್ತಾಪುರ:  ನ.20ರಂದು ನಡೆಯುವ ಕನಕದಾಸರ ಜಯಂತಿ ಸಮಾರಂಭದಲ್ಲಿ ಕಡ್ಡಾಯವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿಯಾಗಬೇಕು ಎಂದು ತಹಸೀಲ್ದಾರ್ ಮಲ್ಲೇಶ ತಂಗಾ ಹೇಳಿದರು.
ಇಲ್ಲಿನ ತಹಸೀಲ್ದಾರ ಕಚೇರಿಯಲ್ಲಿ ನಡೆದ ಕನಕದಾಸ ಜಯಂತಿ ಪೂರ್ವಸಿದ್ಧತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲ ಶಾಲೆ, ಕಾಲೇಜು, ಕಚೇರಿಗಳಲ್ಲಿ ಬೆಳಗ್ಗೆ ಪೂಜೆ ಸಲ್ಲಿಸಿ ಕನಕ ಜಯಂತಿ ಆಚರಿಸಿ ಸಿಬ್ಬಂದಿಯೊಂದಿಗೆ ತಹಸೀಲ್ದಾರ್ ಕಚೇರಿಗೆ ಬರಬೇಕು ಎಂದು ಸೂಚಿಸಿದರು.
ಕನಕದಾಸರ ಬಗ್ಗೆ ಉಪನ್ಯಾಸಕರಿಂದ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗುವುದು. ಆಮಂತ್ರಣ ಪತ್ರಿಕೆ ಮುದ್ರಿಸಿ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಬೆಳೆಗ್ಗೆ 8.30ಕ್ಕೆ ಕನಕದಾಸರ ಭಾವಚಿತ್ರದ ಮೆರವಣಿಗೆಯನ್ನು ಶಹಾಬಾದ್ ಕ್ರಾಸ್‌ನಿಂದ ಆರಂಬಿಸಬೇಕು ಎಂದು ತಾಲೂಕು ಅಧ್ಯಕ್ಷ ಜುಮ್ಮಣ ಪೂಜಾರಿ ಹೇಳಿದರು. ಅದಕ್ಕೆ ಸಮಾಜದ ವತಿಯಿಂದ ಡೊಳ್ಳೂ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಕನಕದಾಸರ ಜೀವನ ಚರಿತ್ರೆಯ 4 ಪುಟದ ಕರಪತ್ರವನ್ನು ಮುದ್ರಿಸಬೇಕು ಎಂದು ಕುರುಬ ಸಮಾಜದ ಮುಖಂಡ ಮಲ್ಲಿಕಾರ್ಜುನ ಪೂಜಾರಿ ಸಲಹೆ ನೀಡಿದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ದೇವಿಂದ್ರಪ್ಪ ಮರತೂರ, ತಾಲೂಕು ಅಧ್ಯಕ್ಷ ಜುಮ್ಮಣ ಪೂಜಾರಿ, ಮುಖಂಡರಾದ ರೇವಣಸಿದ್ದಪ್ಪ ಸಾತನೂರ, ಮಲ್ಲಿಕಾರ್ಜುನ ಪೂಜಾರಿ ಭಂಕೂರ, ಎಸ್.ಎಸ್. ಪೂಜಾರಿ, ಕಲ್ಯಾಣರಾವ್ ಪಾಟೀಲ್, ತಿಪ್ಪಣ ವಗ್ಗರ್, ಮಹೇಶ ಧರಿ, ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪೂಜಾರಿ, ಅರ್ಜುನ ಗಂಗಾಣಿ, ಸೂರ್ಯಕಾಂತ ಪೂಜಾರಿ, ಬಸವರಾಜ ಹೊಸಹಳ್ಳಿ, ರಾಜಣ್ಣ ಕರದಾಳ, ಈರಣ್ಣ ಚೌದರಿ, ಇಬ್ರಾಹಿಂ, ಭೀಮರಾಯ ಕರದಾಳ, ಮೊಹನಬೆಂಜಿ, ಅಧಿಕಾರಿಗಳಾದ ಎಚ್.ಕೆ. ರಾಜಣ್ಣ, ಆರ್.ಎಸ್. ರತ್ನಾಕರ್, ತಾಪಂ ಕಾರ್ಯನಿರ್ವಾಹಕ ಆಧಿಕಾರಿ ಬಸವರಾಜ, ಪುರಸಭೆ ಮುಖ್ಯಾಧಿಕಾರಿ ಅಶೋಕ ಬಿಲಗುಂದಿ ಸೇರಿದಂತೆ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement