ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರೈತರಲ್ಲಿ ಮಂದಹಾಸ ಮೂಡಿಸಿದ ಕೊರಾಜೆನ್

Vishwanath S
Updated On : 10 Nov 2013, 12:31 pm

ಕನ್ನಡಪ್ರಭ ವಾರ್ತೆ ,  ಗುಲ್ಬರ್ಗ ,  ನ.9
ಜಿಲ್ಲೆಯ ಚಿತ್ತಾಪುರ ತಾಲೂಕಿನ ರೈತರು ಆಧುನಿಕ ಮತ್ತು ಗುಣಮಟ್ಟದ ಕೀಟ ನಿಯಂತ್ರಣ ಪದ್ಧತಿ ಅನುಸರಿಸಿ ಬೆಳೆಯಲ್ಲಿ ಬರುವ ಕೀಟಗಳಿಂದ ಸಂರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.
ತೊಗರಿ ಬೆಳೆಯಲ್ಲಿ ಅತ್ಯಧಿಕ ಇಳುವರಿ ಪಡೆಯುವುದು ಸುಲಭದ ಮಾತಲ್ಲ. ಬೆಳೆ ಇನ್ನೇನು ಕೈಗೆ ಸಿಗುತ್ತದೆ ಎಂದಾಗ ಹೂ ಮೊಗ್ಗು ಉದುರುವುದು, ಕಾಳುಗಳು ಖಂಡಾಗುವುದು, ಇಳುವರಿ ಕಡಿಮೆಯಾಗಿ ರೈತರಿಗೆ ಅತ್ಯಧಿಕ ನಷ್ಟ ಆಗುವುದು ಸಾಮಾನ್ಯ ಸಮಸ್ಯೆಯಾಗಿದೆ.
ಮುಖ್ಯವಾಗಿ ಹಸಿರು ಹುಳ (ಕೀಡಿ), ಜೀಡಿ (ಜೋಂಡಿ) ಹುಳಗಳು ತೊಗರಿ ಬೆಳೆಅತ್ಯಧಿಕವಾಗಿ ನಾಶ ಮಾಡಬಲ್ಲಂತವು. ಇಂತಹ ಮಾರಕ ಕೀಟಗಳನ್ನು ನಿಯಂತ್ರಿಸುವುದರ ಜೊತೆಗೆ ಬೆಳೆಯನ್ನು ಸಂರಕ್ಷಿಸಿಕೊಳ್ಳುವುದು ಅತ್ಯಂತ ಕಠಿಣ ಸವಾಲಾಗಿದೆ. ಚಿತ್ತಾಪುರ ತಾಲೂಕದ ಶಿವಕುಮಾರ್ ತಳವಾರ ಇವರು ತಾಲೂಕಿನ ಎಲ್ಲ ರೈತರಂತೆ ವಿವಿಧ ರೀತಿಯ ಕೀಟನಿಯಂತ್ರಣಾ ಔಷಧಿಯನ್ನು ಬಳಸಿ ಸುಮಾರು ವರ್ಷಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳುವುದರಲ್ಲಿ ವಿಫಲರಾಗಿದ್ದರು. ಇವರು ತೊಗರಿ ಬೆಳೆಯಲ್ಲಿ ಪ್ರತಿ ವರ್ಷ ಹೂ ಮೊಗ್ಗು ಉದುರುವುದು ಕಾಳುಗಳು ಖಂಡಾಗುವುದು, ಇಳುವರಿ ಕಡಿಮೆಯಾಗುವುದು ಈ ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದರು.
2 ವರ್ಷದಿಂದ ಶಿವಕುಮಾರ್ ತಳವಾರ ಇವರು ತೊಗರಿ ಬೆಳೆಯನ್ನು ಸಂಪೂರ್ಣವಾಗಿ ಸಂರಕ್ಷಿಸಿಕೊಳ್ಳಲು ಸನ್ನದ್ಧರಾದರು. ಹೊಸ ತಲೆಮಾರಿನ ಡುಪಾಂಟ್ ಕೊರಾಜನ್ ಕೀಟನಾಶಕವನ್ನು ತೊಗರಿ ಬೆಳೆಗೆ ಮೊದಲ ಸಿಂಪಡನೆ ಮಾಡಿ ಈ ಎಲ್ಲ ಸಮಸ್ಯೆಗಳಿಂದ ಈಗ ದೂರ ಉಳಿದಿದ್ದಾರೆ. 25 ಎಕರೆ ಜಾಗದಲ್ಲಿ ತೊಗರಿ ಬೆಳೆ ಬೆಳೆಯುತ್ತಿದ್ದಾರೆ. ಪ್ರತಿವರ್ಷ 25 ಎಕರೆಗೆ 75 ಚೀಲದಂತೆ ತೊಗರಿ ಇಳುವರಿ ತೆಗೆಯುತ್ತಿದ್ದರು. ಆದರೆ, ಕೊರಾಜೆನ ಸಿಂಪಡಿಸಿದ ಮೇಲೆ 112 ಚೀಲ ತೊಗರಿ ಇಳುವರಿ ಪಡೆಯುತ್ತಿದ್ದಾರೆ. ಇದರಿಂದ ಪ್ರತಿ ಎಕರೆಗೆ 1 ಚೀಲ ತೊಗರಿ ಇಳುವರಿ ಹೆಚ್ಚಿಗೆ ಬಂದಿದೆ. ಈ ಮೊದಲು ಪ್ರತಿವರ್ಷ 10-12 ದಿನಕ್ಕೆ ಸಿಂಪಡಣೆ ಮಾಡಬೇಕಾದ ಪ್ರಸಂಗ ಬರುತ್ತಿತು. ಈಗ ಕೊರಾಜೆನ್ ಬಳಸಿದ ಮೇಲೆ 18-22 ದಿನಕ್ಕೊಮ್ಮೆ ಸಿಂಪಡಣೆ ಮಾಡುತ್ತಿದ್ದಾರೆ.
ತೊಗರಿಯಲ್ಲಿ ಹೆಚ್ಚಿನ ಬದಲಾವಣೆ ಎಂದರೆ ಕಾಳು ದಪ್ಪಾಗುವುದು, ತೂಕದಲ್ಲಿ ಹೆಚ್ಚಾಗುವುದು. ಹೂ ಉದರದೆ ಇರುವುದು, ಜೋಂಡಿ ಕಟ್ಟದಿರುವುದು, ಇಳುವರಿ ಹೆಚ್ಚಾಗುವುದು ಮುಂತಾದ ಗುಣಾತ್ಮಕ ಲಕ್ಷಣ ಕಂಡು ಬಂದಿವೆ. ಕೊರಾಜೆನ್ ಸಿಂಪಡಿಸಿದ ಮೇಲೆ ಈ ಎಲ್ಲ ಬದಲಾವಣೆ ತೊಗರಿಯಲ್ಲಿ ಕಂಡಿದ್ದಾರೆ. ಇದರ ಇನ್ನೊಂದು ವಿಶೇಷ ಗುಣ ಎಂದರೆ ಭೂಮಿಯಲ್ಲಿ ಹಸಿ ಕಡಿಮೆ ಆಗುವುದರೊಳಗಾಗಿ ಹೂ ಬೇಗನೆ ಚಟ್ಟಿಯಾಗಿ ಕಾಯಿ ಗಟ್ಟಿಯಾಗುತ್ತದೆ.
ಶಿವಕುಮಾರ ಅವರು ಕೊರಾಜೆನ್ ಔಷಧಿ ಬಗ್ಗೆ ಹೆಮ್ಮೆಯಿಂದ ಹೇಳುವುದು ಹೀಗೆ ಕೊರಾಜೆನ್ ರೈತರ ಬಾಳಿನಲ್ಲಿ ಬೆಳಕನ್ನು ತಂದಿದೆ. ಅಂದರೆ ಪ್ರತಿ ಎಕರೆಗೆ 1 ಚೀಲದಂತೆ ತೊಗರಿ ಇಳುವರಿಯಂತೆ, 25 ಎಕರೆ ಜಮೀನಿನಲ್ಲಿ 37 ಚೀಲ ತೊಗರಿ ಹೆಚ್ಚಿನ ಇಳುವರಿ ಬಂದಿದೆ. ಮಾರುಕಟ್ಟೆಯಲ್ಲಿ ಬೇರೆ ತೊಗರಿಗಿಂತ 200 ಪ್ರತಿ ಕ್ವಿಂಟಾಲ್‌ಗೆ ಹೆಚ್ಚಿನ ಬೆಲೆ. ಆದ್ದರಿಂದ ನಾನು ಮೊದಲು ಖರೀದಿಸಿದ ಜಮೀನಿನ ಬಾಕಿ ಹಣ ತೀರಿಸಲು ಸಾಧ್ಯವಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಎಚ್ಚರ ಅಗತ್ಯ:  ಅನೇಕ ರೈತರು ಕಳಪೆ ಕೀಟನಾಶಕವನ್ನು ಉಪಯೋಗಿಸಿ ಕೈ ಸುಟ್ಟುಕೊಳ್ಳುವ ವರದಿ ಆಗಾಗ ಕಂಡುಬರುತ್ತದೆ. ತೊಗರಿ ಬೆಳೆಯಲ್ಲಿ ಕಾಣಿಸುವ ಕಾಯಿಕೊರಕ ನೊಣಗಳು ಹಾಗೂ ಕೀಟಗಳನ್ನು ನಿಯಂತ್ರಿಸಲು 6-7 ಸಲ ಸಿಂಪಡಣೆ ಮಾಡಿದರೂ ಯಶಸ್ವಿಯಾಗದ ಸಂದರ್ಭ ರೈತರು ತಾವು ಹಾಕಿದ ಬಂಡವಾಳವೆಲ್ಲ ನೀರಲ್ಲಿ ಹೋಮ ಮಾಡಿದಂತಾಗುತ್ತದೆ. ಇಳುವರಿಯೂ ಕಡಿಮೆಯಾಗಿ ಬೇಸಾಯ ಸಾಕು ಎನಿಸುತ್ತದೆ. ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ಮಾರಾಟವಾಗುವ ಕೀಟನಾಶಕಗಳ ಬಗ್ಗೆಯೂ ಎಚ್ಚರ ಅತ್ಯಗತ್ಯ.
ಬೆಲೆ ಕಡಿಮೆ ಎಂದೋ, ಯಾರದ್ದೋ ಒತ್ತಡಕ್ಕೆ ಒಳಗಾಗಿ ಕಳಪೆ ಔಷಧಿ ಬಳಸಿ ಕೈ ಸುಟ್ಟುಕೊಳ್ಳದಿರುವುದು ಒಳಿತು ಎಂಬ ಎಚ್ಚರಿಕೆಯನ್ನೂ ತಮ್ಮ ಅನುಭವದ ಮೂಲಕ ಅವರು ಕಂಡುಕೊಂಡು ಇತರ ರೈತ ಮಿತ್ರರಿಗೆ ಸಲಹೆ ನೀಡುತ್ತಾರೆ. ತೊಗರಿ ಬೆಳೆಯಲ್ಲಿ ಕೊರಾಜೆನ್ ಬಳಸಿ ಯಶೋಗಾಥೆ ಮೆರೆದ ರೈತ ಅವರನ್ನು ಸಂಪರ್ಕಿಸಿ ಅವರು ಅನುಸರಿಸಿದ ಕೀಟನಿಯಂತ್ರಣ ವಿಧಾನದ ಬಗ್ಗೆ ತಿಳಿಯಿರಿ. ಅವರ ಹೊಲಕ್ಕೆ ಖುದ್ದಾಗಿ ಭೇಟಿ ನೀಡಿ ಕಲಿಯಿರಿ. ಮೊ.7760251269.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement