ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸರ್ಕಾರಿ ನೌಕರರಿಗೆ ಹೃದಯ ತಪಾಸಣೆ

Vishwanath S
Updated On : 10 Nov 2013, 12:33 pm

ಶಹಾಪುರ: ಮಧ್ಯಪಾನ, ಧೂಮಪಾನ, ಜಿಡ್ಡು ಪದಾರ್ಥಗಳ ಸೇವನೆ, ಕೆಲಸಗಳ ಒತ್ತಡ, ಮಾನಸಿಕ ಖಿನ್ನತೆಯು ಹೃದಯ ರೋಗಕ್ಕೆ ಕಾರಣವಾಗಿವೆ. ಮಿತವಾದ ಆಹಾರ ನಿರಂತರವಾದ ಯೋಗಸಾಧನೆಯೆ ಈ ರೋಗಕ್ಕೆ ಮದ್ದಾಗಿದೆ. ಮನುಷ್ಯನ ದೇಹದಲ್ಲಿ ಹೃದಯ ಪ್ರಮುಖ ಅಂಗವಾಗಿದೆ. ಆರೋಗ್ಯ ಭಾಗ್ಯ ನಮ್ಮೆಲ್ಲರ ಧ್ಯೇಯವಾಗಲಿ ಎಂದು ಹುಬ್ಬಳಿಯ ಕೆಎಂಎಸ್‌ಕೆಎಲ್‌ಇಎಸ್ ಆಸ್ಪತ್ರೆಯ ಹೃದಯ ತಜ್ಞ ಡಾ. ರಾಜಕುಮಾರ ಹಿರೇಮಠ ತಿಳಿಸಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ನಡೆದ ಸರ್ಕಾರಿ ನೌಕರರಿಗಾಗಿ ಉಚಿತ ಹೃದಯ ರೋಗ ತಪಾಷಣೆ ಶಿಬಿರದಲ್ಲಿ ಉಪನ್ಯಾಸ ಮತ್ತು ತಪಾಸಣೆ ಮಾಡಿ ಮಾತನಾಡಿದರು.
ಈ ಸಮಾರಂಭವನ್ನು ತಾಪಂ ಕಾರ್ಯ ನಿರ್ವಹಣಾಧಿಕಾರಿ ನರಸಿಂಗರಾವ್ ಮುತಾಲಿಕ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಡಿ.ವೈ. ಪಾಟೀಲ್, ಬಿಇಒ ವೆಂಕಯ್ಯ ಇನಾಮದಾರ, ಪಿ. ಕೃಷ್ಣಪ್ಪ ಭೀ.ಗುಡಿ ಕರಾನೌ ಸಂಘದ ಅಧ್ಯಕ್ಷ ಚಂದ್ರಶೇಖರ ಹೋತಪೇಟಕರ ಬಿಸಿ ಊಟ ಯೋಜನೆ ಸಹಾಯಕ ನಿರ್ದೇಶಕ ಸಿದ್ದಣ್ಣ ಮಾನಸುಣಗಿ ಉಪಸ್ಥಿತರಿದ್ದರು.
ನೌಕರರ ಸಂಘದ ತಾಲೂಕಾ ಅಧ್ಯಕ್ಷ ಸುಧಾಕರ ಗುಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಯಪ್ಪಗೌಡ ನಿರೂಪಿಸಿದರು. ತಿಮ್ಮಯ್ಯ ಪುರ್ಲೆ, ಶರಣಬಸವ ಹೊಸ್ಮನಿ, ಗುಲಾಮ ರಸೂಲ ಸಾಬ್, ನಾಗಣಗೌಡ, ಮಲ್ಲಿಕಾರ್ಜುನ ಬಲಕಲ್, ಸಂಗಮೇಶ, ತಿಮ್ಮಣ್ಣ, ಸುರೇಶ ಹಳಿಸಗರ ಮಾರುತಿ ಮಾನು ನಾಗಣ್ಣ ಗುಂಡಳ್ಳಿ ನಾಗೇಂದ್ರಪ್ಪ ಬಾಸುತ್ಕರ ಜಯರಾಮ ಹಣಮಂತ್ರಾವ್ ಮಹ್ಮದ್ ರಫೀಕ ರವೀಂದ್ರ ಸಾಥಿಹಾಳ, ಹಲವು ಇಲಾಖೆಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ನೌಕರರ ತಮ್ಮ ಹೃದಯ ತಪಾಸಣೆ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement