15 ರಂದು ಐಟಿಐ ಕಾಲೇಜಲ್ಲಿ ಕವಿಗೋಷ್ಠಿ
ಸೇಡಂ: ಮಳಖೇಡದ ನಮೋ ಬುದ್ಧ ಸೇವಾ ಕೇಂದ್ರ ಚಾರಿಟೇಬಲ್ ಮತ್ತು ವೆಲ್ಫೇರ್ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ.15ರಂದು ಪಟ್ಟಣದ ಕೊತ್ತಲ ಬಸವೇಶ್ವರ ಕೈಗಾರಿಕಾ ತರಬೇತಿ ಕೇಂದ್ರದ (ಐಟಿಐ) ಕಾಲೇಜಿನಲ್ಲಿ ರಾಷ್ಟ್ರಕೂಟರ ಐತಿಹಾಸಿಕ ವೈಭವ ಕುರಿತ ಕವಿಗೋಷ್ಠಿ ಆಯೋಜಿಸಲಾಗಿದೆ. ಆಸಕ್ತರು, ನ.13 ರೊಳಗಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಅಧ್ಯಕ್ಷ ರಾಜಕುಮಾರ್ ಕಟ್ಟಿ (9341009859), ಸಾಹಿತಿ ಎಂ.ಬಿ. ನಿಂಗಪ್ಪ (8762237344) ಅವರಿಗೆ ಸಂಪರ್ಕಿಸಲು ಕೋರಲಾಗಿದೆ.