ನಾಳೆ ಹನುಮಾನ್ ಮಂದಿರ ಕಳಸಾರೋಹಣ
ಗುಲ್ಬರ್ಗ: ಬ್ರಹ್ಮಪುರ ಬಡಾವಣೆಯ ಗಂಗಾ ನಗರದಲ್ಲಿರುವ ಜೈ ಹನುಮಾನ್ ಮಂದಿರದ ಅಲಂಕೃತ ಗೋಪುರಕ್ಕೆ ಕಳಸಾರೋಹಣ ಕಾರ್ಯಕ್ರಮ ನ. 12ರಂದು ಬೆಳಗ್ಗೆ 11.45ಕ್ಕೆ ನಡೆಯಲಿದೆ.
ಅಂದು ಬೆಳಗ್ಗೆ 8ಕ್ಕೆ ಶ್ರೀರಾಮ ಮಂದಿರದಿಂದ (ಗೋವಾ ಹೋಟಲ್ ಹತ್ತಿರ) ಹನುಮಾನ ಮಂದಿರದವರೆಗೆ ಕಳಸದ ಭವ್ಯ ಮೆರವಣಿಗೆಯು ಬಾಜಾ ಭಜಂತ್ರಿ,
ಮುತ್ತೈದೆಯರ ಕಳಸದೊಂದಿಗೆ ಜರುಗುವುದು.
ಗುಲ್ಬರ್ಗ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಂತ ಗಂಗಾಧರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ಜವಳಿ ಮಂತ್ರಿ ಬಾಬುರಾವ ಚಿಂಚನಸೂರ ಅವರು ಧ್ವಜಾರೋಹಣ ನೆರವೇರಿಸುವರು.
ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಅಜಯಸಿಂಗ್, ಪ್ರಿಯಾಂಕ್ ಖರ್ಗೆ, ಡಾ. ಉಮೇಶ ಜಾಧವ, ಅಲ್ಲಂಪ್ರಭು ಪಾಟೀಲ್, ಅಮರನಾಥ ಪಾಟೀಲ್, ವಿಠ್‌ಠಲ್ ಹೇರೂರ, ತಿಪ್ಪಣಪ್ಪ ಕಮಕನೂರ, ರಾಜಗೋಪಾಲ ರೆಡ್‌ಡಿ ಇತರ ಗಣ್ಯರು ಆಗಮಿಸಲಿದ್ದಾರೆ.