ನಾಳೆಯಿಂದ ಸಿದ್ಧಾರೂಢಶ್ರೀ ಜಾತ್ರೆ
ಗುಲ್ಬರ್ಗ: ಗುಲ್ಬರ್ಗ ತಾಲೂಕಿನ ಯಳವಂತಗಿ (ಕೆ) ಗ್ರಾಮದ ಸಿದ್ದಾರೂಢ ಮಠದ ಮೋಕ್ಷ ಆಶ್ರಮಯದಲ್ಲಿ ನ. 12 ರಿಂದ 16ರವರೆಗೆ ಜಗದ್ಗುರು ಸಿದ್ಧಾರೂಢ ಮಹಾಸ್ವಾಮೀಜಿ 32ನೇ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ನ.12 ರಿಂದ 16ರವರೆಗೆ ಸಂಜೆ 7ರಿಂದ ರಾತ್ರಿ 10ರವರೆಗೆ ಮಠದ ನಾರಾಯಣರಾವ ಮಾದಮಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸದ್ಗುರು ಶಿವಕುಮಾರ್ ಮಹಾಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಮಾತೋಶ್ರೀ ಲಕ್ಷ್ಮೀದೇವಿ ತಾಯಿ ಅವರು ಅವರ ಸನ್ನಿಧಾನದಲ್ಲಿ ಪ್ರವಚನ ನಡೆಯುವುದು. ಪ್ರವಚನ ಕಾರ್ಯಕ್ರಮದ ನಂತರ ಪ್ರತಿ ದಿನವೂ ಗಣ್ಯರಿಗೆ ಸನ್ಮಾನಿಸಲಾಗುವುದು. ನ. 16 ರಂದು ಸದ್ಗುರು ಶಿವಕುಮಾರ್ ಮಹಾಸ್ವಾಮೀಜಿಗಳ ತುಲಾಭಾರ ಮತ್ತು ಸಿದ್ದಾರೂಢ ಉತ್ಸವ ಮೂರ್ತಿ ತುಲಾಭಾರ ನಡೆಯುವುದು. ಶಾಸಕರು, ಗಣ್ಯರು ಪಾಲ್ಗೊಳ್ಳಲಿದ್ದಾರೆ.
--