ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬೆಟ್ಟದ(ಗವಿ) ರಂಗನಾಥ ಸನ್ನಿಧಾನದಲ್ಲಿ ಕಾರ್ತಿಕೋತ್ಸವ

Lingaraj Badiger
Updated On : 11 Nov 2013, 11:33 am

ಶಹಾಪುರ: ಪಟ್ಟಣದ ಹಳೆಪೇಟೆಯ ತುಳೇರ ಸಮಾಜದ ಬಂಧುಗಳು ಆರಾಧ್ಯದೈವ ಬೆಟ್ಟದ(ಗವಿ) ರಂಗನಾಥ ದೇವಸ್ಥಾನದಲ್ಲಿ ಕಾರ್ತಿಕೋತ್ಸವವನ್ನು ವಿಶೇಷ ಪೂಜೆಯೊಂದಿಗೆ ಆಚರಿಸಿದರು. ಓಣಿಯ ಸಮಸ್ತ ಹಿರಿಯರು, ಯುವಕರು ಚಿಕ್ಕಮಕ್ಕಳು ಕುಟುಂಬ ಸಮೇತ ಬೆಟ್ಟಕ್ಕೆ ತೆರಳಿ ಗವಿ ರಂಗನಾಥನಿಗೆ ಪಕ್ಕದ ತಾವರಕೆರೆಯಿಂದ ನೀರು ತಂದು ಅಭಿಷೇಕ ಕ್ಷೀರಾಭಿಷೇಕ ವಿಶೇಷ ಅಲಕಾಂರ, ನೈವೇದ್ಯ ಸಮರ್ಪಣೆ ಕಾರ್ಯಕ್ರಮ ಸಂಭ್ರಮದಿಂದ ಆಚರಿಸಿದರು. ಅಭಿನವ ತಿರುಪತಿ ಎಂದೇ ಕರೆಯುವ ರಂಗನಾಥ ದೇವಸ್ಥಾನ ಅತ್ಯಂತ ಪ್ರಾಚೀನ ಹಾಗೂ ಭಕ್ತಿಯ ಮತ್ತು ಜಾಗೃತಿಯ ಕೇಂದ್ರವಾಗಿದೆ. ಬೆಟ್ಟದಲ್ಲಿ ಇಕ್ಕಟ್ಟಾದ ರಸ್ತೆಯಿದ್ದು, ಪ್ರಯಾಣಕ್ಕೆ ಪ್ರಯಾಸವಿದ್ದರೂ ಭಕ್ತಿಯಿಂದ ಜನತೆ ಪ್ರತಿವರ್ಷ ವಿಶೇಷ ಸೇವೆ ಸಲ್ಲಿಸುತ್ತಾ ರಾತ್ರಿ ಭಜನೆ ಕಾರ್ಯಕ್ರಮಗಳು ಆಯೋಜಿಸಿ ತುಳೇರ ಸಮುದಾಯ ಭಗವಂತನ ಕೃಪೆಗೆ ಪಾತ್ರರಾದರು.
--
ಆಡಳಿತ ಮಂಡಳಿಗೆ ಸದಸ್ಯರ ರಾಜಿನಾಮೆ
ಯಾದಗಿರಿ: ತಾಲೂಕಿನ ಸೈದಾಪುರ ಗ್ರಾಮದಲ್ಲಿರುವ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸದಸ್ಯತ್ವ ಸ್ಥಾನಕ್ಕೆ ಹಾಲಿ ಸದಸ್ಯರಾದ ಸಂಗಾರಡ್ಡಿ ಮಲ್ಹಾರ, ಶರಣಗೌಡ ಬಿರಾದರ್ ಗೊಂದೆಡಗಿ ಹಾಗೂ ಮಲ್ಲಣ್ಣ ಬಾರಡ್ಡಿ ಸಾವೂರ್ ರಾಜಿನಾಮೆ ನೀಡಿದ್ದಾರೆ.
  ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ನಾವು ಅ.25 2011 ರಂದು ನಡೆದ ಚುನಾವಣೆಯಲ್ಲಿ ಆಡಳಿತ ಮಂಡಳಿಗೆ ಸದಸ್ಯರಾಗಿ ಆಯ್ಕೆಯಾಗಿದ್ದೇವೆ. ಸಂಘದ ನಿಯಮಾವಳಿ (ನಿಯಮ-12) ಪ್ರಕಾರ ಆಡಳಿತ ಮಂಡಳಿಯ ಎರಡು ವರ್ಷಗಳ ಅವಧಿ ಅ.10 2013ಕ್ಕೆ ಮುಕ್ತಾಯಗೊಂಡಿದೆ.
  ಪ್ರಸಕ್ತ ಆಡಳಿತ ಮಂಡಳಿಯು ಮುಂದಿನ ಆಡಳಿತ ಮಂಡಳಿಯ ಆಯ್ಕೆ ಮಾಡಬೇಕಾಗಿತ್ತು. ಆದರೆ ಇಲ್ಲಿಯ ವರೆಗೆ ಅವರು ಅವಧಿ ಮುಗಿದರು. ಯಾವುದೇ ಕ್ರಮ ಕೈಗೊಂಡಿಲ್ಲ. ಅವಧಿ ಮುಗಿದರು ನಾವು ಸದಸ್ಯರಾಗಿ ಮುಂದುವರೆಯವುದು ಕಾನೂನು ನಿಯಮ ಬಾಹಿರವಾಗಿರುತ್ತದೆ. ಕಾರಣ ನಾವು ರಾಜಿನಾಮೆ ಪತ್ರವನ್ನು ಆಡಳಿತ ಮಂಡಳಿ ಅಧ್ಯಕ್ಷ ಸಿದ್ಧಣಗೌಡ ಕಡೇಚೂರ ಹಾಗೂ ಜಿಲ್ಲಾ ಸಂಘಗಳ ನೋಂದಾಣಿಧಿಕಾರಿಗಳಿಗೆ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement