ಕಾಮಗಾರಿ ಚಾಲನೆ ಅಭಿಯಾನ ಇಂದಿನಿಂದ
ಯಾದಗಿರಿ: ಖಾತ್ರಿ ಯೋಜನೆಯಡಿ ಮುಖ್ಯಮಂತ್ರಿಗಳು ಹೊಸದಾಗಿ ಯೋಜನೆಯಡಿ ವ್ಯಕ್ತಿಗತ ಮತ್ತು ಸಮೂಹಿಕ ಕಾಮಗಾರಿಗಳ ಚಾಲನೆಗಾಗಿ ಶಹಾಪುರ ವಲಯದಲ್ಲಿ ಸಗರ ಗ್ರಾಮ ಪಂಚಾಯ್ತಿಯಲ್ಲಿ ನಾಗಟಗಿ, ರಸ್ತಾಪುರ, ಸಗರ ಗ್ರಾಮ ಪಂಚಾಯ್ತಿಗಳಲ್ಲಿ ಅಂದೋಲನೋಪಾದಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಅಭಿಯಾನವನ್ನು ನ.12 ರಂದು ಬೆಳಗ್ಗೆ 10ಕ್ಕೆ ಸಗರ ಪಂಚಾಯ್ತಿ ಕಾರ್ಯಲಯದಲ್ಲಿ ನಿಗದಿಪಡಿಸಲಾಗಿದೆ.
ವಲಯ ಮಟ್ಟದ ಅಭಿಯಾನದಲ್ಲಿ ವ್ಯಕ್ತಿಗತ ಆಧಾರಿತ ಫಲಾನುಭವಿಗಳ ಹೆಸರಿನ ಸ್ಥಳದಲ್ಲಿ ಕಾರ್ಯಾದೇಶ ನೀಡಲಾಗುವುದು. ಫಲಾನುಭವಿಗಳು ಬ್ಯಾಂಕ್ ಖಾತೆ ಹಾಗೂ ಉದ್ಯೋಗ ಚೀಟಿಯೊಂದಿಗೆ ಬರುವುದು.
ಒಂದು ವೇಳೆ ಬ್ಯಾಂಕ್ ಖಾತೆ ಹಾಗೂ ಉದ್ಯೋಗ ಚೀಟಿ ಇಲ್ಲದಿದ್ದಲ್ಲಿ ಮೂರು ಭಾವಚಿತ್ರ ಹಾಗೂ ಫೋಟೋ ಗ್ರೂಫ್ ಆಡ್ರೇಸ್ ಫ್ರೋಪ್ನೊಂದಿಗೆ ಹಾಜರಾದಲ್ಲಿ ಸ್ಥಳದಲ್ಲಿಯೇ ಉದ್ಯೋಗ ಚೀಟಿ ಮತ್ತು ಬ್ಯಾಂಕ್ಖಾತೆ ಹೊದಗಿಸಲಾಗುವುದು. ಸಾರ್ವಜನಿಕರಿಗೆ ಸದರಿ ಅಭಿಯಾನಕ್ಕೆ ಹಾಜರಾಗುವಂತೆ ಸಿಇಒ ತಿಳಿಸಿದ್ದಾರೆ.