ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ
ಗುರುಮಠಕಲ್: ತಾಲೂಕಿನ ಬೋರಬಂಡ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನ ಮಂಡಳಿ ವತಿಯಿಂದ ಸಾಮೂಹಿಕ ವಿವಾಹ ಆಯೋಜಿಸಿದ್ದು, ಮದುವೆ ಮಾಡಿಕೊಳ್ಳಲು ಇಚ್ಚಿಸುವ ವಧುವರರು ನ.14 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರತಿವರ್ಷದಂತೆ ಲಕ್ಷ್ಮೀತಿಮ್ಮಪ್ಪ ಜಾತ್ರೆ ನ.15 ಮತ್ತು 16ರಂದು ಎರಡು ದಿನಗಳ ಜಾತ್ರೆಯಲ್ಲಿ ಮೊದಲ ದಿನ ಸಂಜೆ 6ಕ್ಕೆ ಕಾರ್ತಿಕ ದೀಪೋತ್ಸವ ಹಾಗೂ ರಾತ್ರಿ 9ರಿಂದ 11ಕ್ಕೆ ಪಲ್ಲಕಿ ಮೆರವಣಿಗೆ ಮಾಡಲಾಗುವುದು. ನ.16 ರಂದು 10ಕ್ಕೆ ಕಲ್ಯಾಣೋತ್ಸವ ಹಾಗೂ ರಥೋತ್ಸವ ಜರುಗಲಿದ್ದು, ಇದೇ ಸಂದರ್ಭದಲ್ಲಿ ಸಮೂಹಿಕ ಉಚಿತ ಮದುವೆ ನಡೆಸಲಾಗುವುದು. ವಧುವರರು ಮೊ.9481261343 ಗೆ ನರೇಂದ್ರ ರಾಠೋಡ ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.
ಸಂಭ್ರಮದ ಕಾಳಿಕಾದೇವಿ ಜಾತ್ರೆ
ಹುಣಸಗಿ: ಪಟ್ಟಣದ ಕಾಳಿಕಾದೇವಿಯ ಐದನೇ ವರ್ಷದ ಜಾತ್ರಾ ಮಹೋತ್ಸವವು ಅತ್ಯಂತ ಶ್ರದ್ಧಾ, ಭಕ್ತಿ ಪೂರ್ವಕವಾಗಿ ನಡೆಯಿತು. ಬೆಳಿಗ್ಗೆ ಸಂಭ್ರಮದಿಂದ ಕಳಶಾರೋಹಣ, ಧ್ವಜಾರೋಹಣ, ಪಲ್ಲಕ್ಕಿ ಉತ್ಸವ, ಪುರವಂತರ ಸೇವೆ, ಪಲ್ಲಕ್ಕಿ ಉತ್ಸವ, ಮಹಾ ಮಂಗಳಾರತಿ, ಮಹಾಪ್ರಸಾದ ಕಾರ್ಯಕ್ರಮ ನಡೆಯಿತು. ಶಹಾಪುರ ಏಕದಂಡಗಿ ಮಠದ ಅಜ್ಜೇಂದ್ರ ಮಹಾಸ್ವಾಮಿ ಮತ್ತು ದೇವಾಪುರದ ಜಡಿ ಶಾಂತಲಿಂಗೇಶ್ವರ ಮಠದ ಶಿವಮೂರ್ತಿ ಶಿವಾಚಾರ್ಯರು ಪಾಲ್ಗೊಂಡಿದ್ದರು. ನಂತರ ವಿಜಾಪುರದ ಜ್ಞಾನ ಯೋಗಾಶ್ರವುದ ಸಿದ್ದೇಶ್ವರ ಮಹಾಸ್ವಾಮಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಹುಣಸಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿಶ್ವಕರ್ಮ ಸಮಾಜ ಬಾಂಧವರು ಮತ್ತು ಊರಿನ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಪುರವಂತರ ಸೇವೆಯೊಂದಿಗೆ ಕಾಳಿಕಾದೇವಿಯ ದೇವಸ್ಥಾನದಿಂದ ಊರಿನ ಪ್ರಮುಖ ಬೀದಿಗಳ ಮುಖಾಂತರ ಪಲ್ಲಕ್ಕಿ ಉತ್ಸವ ಜರುಗಿತು.
15ರಂದು ಪುಣ್ಯಸ್ಮರಣೆ
ಶಹಾಪುರ: ಬರುವ ನ.15ರಂದು ಸಗರ ನಾಡಿನ ಧೀಮಂತ ನಾಯಕ ದಿ. ಬಾಪು
ಗೌಡ
ದರ್ಶನಾ
ಪುರ 25ನೇ ಪುಣ್ಯಸ್ಮರಣೆಯನ್ನು ಚರಬಸವೇಶ್ವರ ವಿದ್ಯಾಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 9.30 ಬಿ.ಗುಡಿ ವೃತ್ತದಲ್ಲಿರುವ ದಿ. ಬಾಪುಗೌಡರ ಪುತ್ಥಳಿಗೆ ಮಾಲಾರ್ಪಣೆ ನಂತರ ಪುಣ್ಯಸ್ಮರಣೆ ಕಾರ್ಯಕ್ರಮಗಳು ಶಾಲಾ ಆವರಣದಲ್ಲಿ 10ಕ್ಕೆ ಜರುಗಲಿದ್ದು ಅಭಿಮಾನಿಗಳು, ಹಿತೈಶಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಮನವಿ ಮಾಡಿದ್ದಾರೆ.