ಮೋಟ್ ಬ್ಯಾಂಕ್ಗಾಗಿ ಕಾಂಗ್ರೆಸ್ಸಿಂದ ಮುಸ್ಲಿಮರ ಓಲೈಕೆ: ಕೆಜೆಪಿ
ಶಹಾಪುರ: ಕೇವಲ ವೋಟ್ ಬ್ಯಾಂಕ್ ರಾಜಕಾರಣವನ್ನೇ ಬಂಡವಾಳವಾಗಿಟ್ಟುಕೊಂಡ ಕಾಂಗ್ರೆಸ್ ಆಡಳಿತದ ಸರ್ಕಾರ ಅಲ್ಪಸಂಖ್ಯಾತರಿಗಾಗಿ ಶಾದಿಭಾಗ್ಯ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಇದು ಇತರ ಎಲ್ಲಾ ವರ್ಗದ ಜನಸಮುದಾಯವನ್ನು ಕೆರಳಿಸಿದೆ ಎಂದು ಕೆಜೆಪಿ ತಾಲೂಕಾಧ್ಯಕ್ಷ ಭೀಮಯ್ಯಗೌಡ ಕಟ್ಟಿಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶಾದಿಭಾಗ್ಯ ವಿರೋಧಿಸಿ ಕೆಜೆಪಿ ಪ್ರಮುಖರೊಂದಿಗೆ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದು, ಯೋಜನೆಗಳಲ್ಲಿ ತಾರತಮ್ಯ ಬೇಡ. ಎಲ್ಲ ಬಡವರಿಗೂ ಅನ್ವಯವಾಗುವಂತೆ ಇರಲಿ ಎಂದು ರಾಜ್ಯಧ್ಯಕ್ಷ ಯಡಿಯೂರಪ್ಪ ನಡೆಸಿದ ಧರಣಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಸರ್ಕಾರದ ಏಕಪಕ್ಷೀಯ ನಿರ್ಣಯ ಖಂಡನೀಯ ಎಂದರು.
ಪ್ರಮುಖರಾದ ಅಮಾತೆಪ್ಪ ಕಂದಕೂರ, ಡಾ. ಮಲ್ಲನಗೌಡ ಉಕ್ಕಿನಾಳ, ಮಲ್ಲಣ್ಣಮಡ್ಡಿ, ಸಾಹೇಬಗೌಡ ಬಿಳವಾರ, ವಿಶ್ವನಾಥರಡ್ಡಿ, ಮಾನಯ್ಯ ಹಾದಿಮನಿ, ಸಂತೋಷ ಗುತ್ತೇದಾರ, ವಸಂತಸುರಪುರ, ಬಸವರಾಜ ಆನೇಗುಂದಿ, ಶೇಖಲಾಡ್ಲೆ, ಗುರುಮದ್ದಿನ್, ಶಾಂತಪ್ಪ ಕಟ್ಟಿಮನಿ, ಶೀಲಪ್ಪ ಚಿಂಚೋಳಿ, ದೇವಿಂದ್ರ ತೋಟಿಗೇರ, ಚಂದ್ರಶೇಖರ, ಕಾರ್ಯಕರ್ತರು ಇದ್ದರು.