ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಾಂತಿಯುತ ಮೊಹರಂಗೆ ಮನವಿ

Rashmi Kasaragodu
Updated On : 12 Nov 2013, 11:54 am

ಚಿಂಚೋಳಿ: ಹಿಂದು- ಮುಸ್ಲಿಮರ ಭಾವೈಕ್ಯತೆ ಸಂಕೇತವಾಗಿರುವ ಮೊಹರಂ ಹಬ್ಬವನ್ನು ನ.14ರಂದು ಅತ್ಯಂತ ಶಾಂತಿಯುತವಾಗಿ ಆಚರಿಸಬೇಕೆಂದು ಚಿಂಚೋಳಿ ಸಿಪಿಐ ಇಸ್ಮಾಯಿಲ್ ಶರೀಫ್ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಪ್ರಯುಕ್ತವಾಗಿ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಪಟ್ಟಣದಲ್ಲಿ ವಿವಿಧ ಬಡಾವಣೆಯಲ್ಲಿ ಒಟ್ಟು 22 ಸ್ಥಳಗಳಲ್ಲಿ ಪೀರ್ಗಳನ್ನು ಕೂಡಿಸಲಾಗುತ್ತಿದೆ. ಎಲ್ಲ ವರ್ಗದ ಜನರು ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕೆಂದು ಎಂದರು. ಪಪಂ ಉಪಾಧ್ಯಕ್ಷ ಶಾಮರಾವ ಕೊರವಿ, ಪಪಂ ಮಾಜಿ ಉಪಾಧ್ಯಕ್ಷ ಕೆ.ಎಂ. ಬಾರಿ, ಪಪಂ ಸದಸ್ಯ ಅಬ್ದುಲ್ ಬಾಸೀತ್, ಶಿವಕುಮಾರ್ ಕೊಳ್ಳೂರ್, ಲಕ್ಷ್ಮಣ ಅವಂಟಿ, ಮಹ್ಮದ್ ಹಾಪೀಜ್, ಆರ್.ಗಣಪತರಾವ, ಗೌತಮ ಬೊಮ್ಮನಳ್ಳಿ, ಗೋಪಾಲ್ ರಾಂಪುರೆ, ಮಗದೂಮ್ ಖುರೇಶಿ ಮುಂತಾದವರು ಮಾತನಾಡಿದರು. ರಾಮರಾವ ಮಾಲಿಪಾಟೀಲ್, ಜ್ಯೋರ್ತಿಲಿಂಗ ಸೂಗೂರ, ಶಾಮರಾವ ಚಿಂಚೋಳಿ ಇತರರು. ಪಿಎಸ್ಐ ಶಿವಶಂಕರ ಸಾಹು ಸ್ವಾಗತಿಸಿದರು. ಪಿಸಿ ರೇವಣಸಿದ್ದ ವಂದಿಸಿದರು.
ವಡಗೇರಾ: ನಾಳೆ ಉಪನ್ಯಾಸ
ಜೇವರ್ಗಿ: ತಾಲೂಕಿನ ವಡಗೇರಾ ಗ್ರಾಮದಲ್ಲಿ ನ.13ರಂದು ಶ್ರೀನಂದಿ ಸೇವಾ ಸಂಸ್ಥೆ ಉದ್ಘಾಟನೆ ಹಾಗೂ ಗ್ರಾಮೀಣ ಮಟ್ಟದಲ್ಲಿ ಶೈಕ್ಷಣಿಕ ಸಮಸ್ಯೆಗಳು ಕುರಿತು ಉಪನ್ಯಾಸ ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ವಡಗೇರಾ ಗ್ರಾಮದಲ್ಲಿರುವ ರಾಮಲಿಂಗೇಶ್ವರ ಮಠದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ವೀರಯ್ಯ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ನಂದಿ ಸೇವಾ ಸಂಸ್ಥೆಯ ಅಧ್ಯಕ್ಷ ಅಂಬರೀಶ ಅಂಕಲಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಯಶವಂತರಾಯಗೌಡ ಅಂಕಲಗಿ, ಗ್ರಾಪಂ ಅಧ್ಯಕ್ಷೆ ಪದ್ಮಾವತಿ ಮಲ್ಲಣ್ಣಗೌಡ ಸನ್ನತಿ, ಅಮೃತಗೌಡ ಪೊಲೀಸ್ಪಾಟೀಲ್, ಗಂಗಾಧರ ಮಾರಡಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಜರ್ ಹುಸೇನ್, ಫಕಿರಪ್ಪಗೌಡ ಗುಬೇಡ, ಕುಮಾರಗೌಡ ಅಂಕಲಗಿ, ಬಾಪುಗೌಡ ಮಾಲಿಪಾಟೀಲ್, ಶಿವಾಶರಣಪ್ಪ ಶಿರೂರ್  ಪಾಲ್ಗೊಳ್ಳಲಿದ್ದು, ಶಂಕರಗೌಡ ಸನ್ನತಿ ಉಪನ್ಯಾಸ ನೀಡಲಿದ್ದಾರೆ.
ನಾಳೆ ಜಿಲ್ಲಾ ನೀರು, ನೈರ್ಮಲ್ಯ ಸಮಿತಿ ಸಭೆ
ಗುಲ್ಬರ್ಗ: ನಿರ್ಮಲ ಭಾರತ ಅಭಿಯಾನದಡಿ ಗುಲ್ಬರ್ಗ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿಯ ಸಭೆಯು ನ.13ರಂದು ಬೆಳಗ್ಗೆ 11 ಗಂಟೆಗೆ ಹಳೆ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement