ಶಾದಿಭಾಗ್ಯ ವಿಸ್ತರಣೆಗೆ ಕೆಜೆಪಿ ಆಗ್ರಹ
ಗುಲ್ಬರ್ಗ: ಶಾದಿಭಾಗ್ಯ ಯೋಜನೆಯನ್ನು ಎಲ್ಲ ವರ್ಗಗಳ ಬಡವರಿಗೆ ವಿಸ್ತರಿಸುವಂತೆ ಒತ್ತಾಯಿಸಿ ಕೆಜೆಪಿ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಸುನೀಲ್ ವಲ್ಯಾಪುರೆ ಮತ್ತು ರಾಜ್ಯ ಉಪಾಧ್ಯಕ್ಷ ಬಾಬುರಾವ ಚವ್ಹಾಣ ನೇತೃತ್ವದಲ್ಲಿ ನೂರಾರು ಮುಖಂಡರು, ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.
ಎಲ್ಲ ಜಾತಿ, ಜನಾಂಗದಲ್ಲಿಯೂ ಬಡವರಿದ್ದು, ಈ ಯೋಜನೆಯನ್ನು ಎಲ್ಲ ವರ್ಗದ ಬಡವರಿಗೆ ವಿಸ್ತರಿಸಬೇಕೆಂದು ಪ್ರತಿಭಟನಾಕರಾರು ಆಗ್ರಹಿಸಿದರು. ಪಕ್ಷದ ರಾಜ್ಯ ಕಾರ್ಯದರ್ಶಿ ಸುಭಾಷ ಬಿರಾದಾರ, ಮಹಿಳಾ ಘಟಕ ಜಿಲ್ಲಾಧ್ಯಕ್ಷ ಗೀತಾ, ಮಹಾನಗರ ಜಿಲ್ಲಾಧ್ಯಕ್ಷ ಬಸವರಾಜ ಇಂಗಿನ್, ಆಳಂದ ಶಾಸಕ ಬಿ.ಆರ್. ಪಾಟೀಲ್ ಇದ್ದರು.