16ರಂದು ದೇಗುಲಕ್ಕೆ ಅಡಿಗಲ್ಲು ಸಮಾರಂಭ
ಚಿಂಚೋಳಿ: ತಾಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ಸೋಮೇಶ್ವರ ದೇವಸ್ಥಾನ ಜೀರ್ಣೋದ್ದಾರ ಸಮಿತಿ ವತಿಯಿಂದ ನ.16 ರಂದು ದೇವಸ್ಥಾನದ ಅಡಿಗಲ್ಲು ಸಮಾರಂಭ ನಡೆಯಲಿದೆಂದು ಗ್ರಾಮದ ಮುಖಂಡ ಶೇಖರ ಗುತ್ತೇದಾರ ಗಾರಂಪಳ್ಳಿ ತಿಳಿಸಿದ್ದಾರೆ.
ಹಾರಕೂಡ ಸಂಸ್ಥಾನ ಹಿರೇಮಠ ಪೀಠಾಧಿಪತಿ ಚೆನ್ನವೀರ ಶ್ರೀ ಅಮೃತ ಹಸ್ತದಿಂದ ನೆರವೇರಲಿದೆ. ಕಲ್ಯಾಣ ಶ್ರೀ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೀದರ್ ಸಂಸದ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಶಾಸಕ ಡಾ. ಉಮೇಶ ಜಾಧವ, ಶಿವಶರಣಯ್ಯ ಶ್ರೀ, ಜಿಪಂ ಸದಸ್ಯರಾದ ದೀಪಕನಾಗ ಪುಣ್ಯಶೆಟ್ಟಿ, ಸಂಜೀವನ್ ಯಾಕಾಪುರ, ಸುನಂದಾ ಕೊರವಿ, ತಾಪಂ ಅಧ್ಯಕ್ಷೆ ಮಲ್ಲಮ್ಮ ಪಾಟೀಲ್, ಗ್ರಾಪಂ ಅಧ್ಯಕ್ಷೆ ನರಸಮ್ಮ ಆವಂಟಿ, ತಾಪಂ ಸದಸ್ಯೆ ಅನುಸೂಯಾದೇವಿ ಪಸ್ತಾಪುರ, ಮಾಜಿ ಜಿಪಂ ಅಧ್ಯಕ್ಷ ಭೀಮರಾವ ತೇಗಲತಿಪ್ಪಿ, ಜಗದೇವ ಗುತ್ತೇದಾರ, ಚೆಟ್ಟಿನಾಡ ಸಿಮೆಂಟ್ ಕಂಪನಿ ಜನರಲ್ ಮ್ಯಾನೇಜರ್ ಟಿ, ಸತೀಶಕುಮಾರ್, ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಜಗದೀಶಸಿಂಗ್ ಠಾಕೂರ, ಮಿರಿಯಾಣ ಗ್ರಾಪಂ ಅಧ್ಯಕ್ಷ ಬಸವರಾಜ ಮುಂತಾದವರು ಭಾಗವಹಿಸುವರೆಂದು ಗ್ರಾಮದ ಮುಖಂಡ ಶೇಖರ ಗುತ್ತೇದಾರ ಗಾರಂಪಳ್ಳಿ ತಿಳಿಸಿದ್ದಾರೆ.