ಉಚಿತ ಆಯುರ್ವೇದ ತಪಾಸಣಾ ಶಿಬಿರ
ಗುಲ್ಬರ್ಗ: ನಗರದ ಸೇಡಂ ರಸ್ತೆಯ ಹಿಂಗುಲಾಂಬಿಕಾ ಶಿಕ್ಷಣ ಸಂಸ್ಥೆಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ವತಿಯಿಂದ ನ.13ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಗುದ ಸಂಬಂಧಿ ರೋಗಗಳ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಶಿಬಿರದಲ್ಲಿ ಆಯುರ್ವೇದ ತಜ್ಞ ಡಾ. ರಾಮರಾವ ದೇಶಮುಖ, ಡಾ. ಮಹೇಶ ಭಾಲ್ಕೆ ಮತ್ತು ಡಾ. ಶಂಭುಲಿಂಗ ಮನಗೂಳಿ ಇನ್ನಿತರ ವೈದ್ಯ ವೃಂದವು ಪಾಲ್ಗೊಂಡು ಉಚಿತ ತಪಾಸಣಾ ಮತ್ತು ಸಲಹೆ ಸೂಚನೆಗಳನ್ನು ನೀಡುವರು.
ಗಂಟಲು ನೋವು, ನೆಗಡಿ, ಕಿವಿ, ಕಣ್ಣು, ಮೂಗು ಮುಂತಾದ ರೋಗಗಳಿಗೆ ಆಯುರ್ವೇದ ತಜ್ಞ ಡಾ. ವಿಜಯಲಕ್ಷ್ಮೀ ಹಾಗೂ ಡಾ. ವಿದ್ಯಾವಾಲಿ ಉಚಿತ ತಪಾಸಣಾ ಮಾಡಲಿದ್ದಾರೆ.
ಈ ಶಿಬಿರದ ಪ್ರಯೋಜನ ನಾಗರಿಕರು ಪಡೆದುಕೊಳ್ಳಬೇಕೆಂದು ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ. ಅಲ್ಲಂಪ್ರಭು ಮತ್ತು ಅಧ್ಯಕ್ಷ ಸುರೇಶ ಬುಲಬುಲೆ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ 08472-265121ಗೆ ಸಂಪರ್ಕಿಸಬಹುದು.