ಕನ್ನಡ, ಕವಿರಾಜ ಮಾರ್ಗದ ಮಹತ್ವ ಅರಿಯಲಿ
ಕನ್ನಡಪ್ರಭ ವಾರ್ತೆ ಸೇಡಂ ನ.11
ಕನ್ನಡದ ಕವಿರಾಜ ಮಾರ್ಗ ಅತ್ಯಂತ ಮಹತ್ವದ್ದು. ಇದನ್ನು ಮತ್ತು ಕನ್ನಡ ಭಾಷೆಯ ಮಹತ್ವವನ್ನು ಕನ್ನಡ ಭಾಷೆಗೆ ತೊಡಕುಂಟು ಮಾಡುವವರಿಗೆ ತಿಳಿ ಹೇಳಬೇಕು ಹಾಗೂ ಭಾಷಾ ಸಾಮರಸ್ಯ ಕದಡುವುದನ್ನು ಸಹಿಸಲಾಗುವುದಿಲ್ಲ ಎಂದು ಜೇವರ್ಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಕವಿ ಜೋಗೂರ ಹೇಳಿದರು.
ಸೇಡಂನ ವಿಶ್ವಗಂಗಾ ಶಿಕ್ಷಣ ಸಂಸ್ಥೆಯ ಜ್ಞಾನಜ್ಯೋತಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಗುಲ್ಬರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸೇಡಂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡದ ಶ್ರೇಷ್ಠ ಕೃತಿ ಕವಿರಾಜ ಮಾರ್ಗ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕವಿರಾಜ ಮಾರ್ಗದ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದ ಹಿರಿಯ ಲೇಖಕ, ಸೇಡಂ ನೃಪತುಂಗ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಶ್ರೀಶೈಲ್ ಬಿರಾದಾರ ಕನ್ನಡ ಬಾಷೆಯ ಬೇರೆ ಭಾಷೆಗಳಿಗಿಂತ ವಿಭಿನ್ನ ಹಾಗೂ ಸರ್ವ ಶ್ರೇಷ್ಟವಾದದ್ದು, ಅದನ್ನು ಉಳಿಸಿ ಬೆಳೆಸಬೇಕಾದದ್ದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ ಎಂದರು.
ವಿಶ್ವಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಕರ ಬಿರಾದಾರ, ಸೇಡಂ ತಾಲೂಕು ಕಸಾಪ ಅಧ್ಯಕ್ಷ ನಾಗಯ್ಯ ಸ್ವಾಮಿ ಬೊಮ್ನಳ್ಳಿ, ಉಪನ್ಯಾಸಕ ರಾಜಶೇಖರ ಬೋಳೇವಾಡ, ನಾಟಕಕಾರ ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ, ಮಂಜುನಾಥ, ಅಂಬಿಕೇಶ್ವರ ಹೊನಕೇರಿ, ಆನಂದ ಮಾಡಬೂಳ, ನರಸಪ್ಪ ಸಣ್ಣಳ್ಳಿ, ಹೇಮಾರೆಡ್ಡಿ, ದೇವೇಂದ್ರಮ್ಮ ಪವಾಡಶೆಟ್ಟಿ, ಗೌರಿ ಮೂಲಗೆ ಉಪಸ್ಥಿತರಿದ್ದರು.
ವಿಶ್ವಜ್ಯೋತಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ದುಂದಪ್ಪ ಹಿಪ್ಪರಗಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ರೇವಣಸಿದ್ಧಯ್ಯ ಹಿರೇಮಠ ವಂದಿಸಿದರು.