ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನೀರಾವರಿ ಸಲಹಾ ಸಮಿತಿ ಸಭೆ ಮುಂದಕ್ಕೆ...

Rashmi Kasaragodu
Updated On : 13 Nov 2013, 11:57 am

ಹುಣಸಗಿ: ನ. 13ರಂದು ಆಲಮಟ್ಟಿಯಲ್ಲಿ ಕೃಷ್ಣ ಅಚ್ಚುಕಟ್ಟು ಪ್ರದೇಶಕ್ಕೆ ಸಂಬಂಧಿಸಿದ ನೀರಾವರಿ ಸಲಹಾ ಸಮಿತಿಯ ಸಭೆಯನ್ನು ಅನಿರ್ಧಿಷ್ಟ ಅವಧಿಗೆ ಮುಂದೂಡಲಾಗಿದೆ.
ನ. 9ರ ಶನಿವಾರ ಬೆಂಗಳೂರಿನಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ ಸಂಬಂಧಿಸಿದ ನೀರಾವರಿ ಸಲಹಾ ಸಮಿತಿಯ ಸಭೆ ಕರೆಯುವ ಮುನ್ನ ಪೂರ್ವಭಾವಿ ಸಭೆಯನ್ನು ನಡೆಸಲಾಗಿತ್ತು. ಅದರಂತೆ ನ. 13ರಂದು ಆಲಮಟ್ಟಿಯಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಇದೀಗ ಯಾವುದೇ ಮುನ್ಸೂಚನೆ ಇಲ್ಲದೇ ಮುಂದುಡಿರುವುದು ಅನೇಕ ಸಂಶಯಗಳಿಗೆ ಕಾರಣವಾಗಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ರಾಯಚೂರು, ಬಿಜಾಪುರ, ಯಾದಗಿರಿ, ಬಾಗಲಕೋಟೆ ಜಿಲ್ಲೆಗಳ ಸುಮಾರು ತಾಲೂಕುಗಳು ಒಳಗೊಂಡಿವೆ. ಬೇಸಿಗೆ ಹಂಗಾಮಿಗಾಗಿ ಎಲ್ಲಿಯವರೆಗೆ ಕಾಲುವೆಯಲ್ಲಿ ನೀರು ಹರಿಯುವುದು ಎಂದು ಅಧಿಕೃತವಾಗಿ ತಿಳಿಯಪಡಿಸುವ ಈ ಸಭೆ ಸಚಿವರ, ಶಾಸಕರ, ಅಧಿಕಾರಿಗಳ ಹುಡುಗಾಟಿಕೆಯ ವಸ್ತುವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒತ್ತಡ ಏಕಿಲ್ಲ?: ಬೇಸಿಗೆ ಹಂಗಾಮಿನ ನೀರು ಹರಿಯುವ ಅವಧಿಯನ್ನು ಗಮನಿಸಿ ಹಣಕಾಸು, ಗೊಬ್ಬರ, ಬೀಜ, ಹೊಂದಿಸಿಕೊಳ್ಳಬೇಕಾಗುವುದು. ಆದರೆ ಅಚ್ಚುಕಟ್ಟು ಪ್ರದೇಶದ ಯಾವುದೇ ಶಾಸಕರು ಇಲ್ಲಿಯವರೆಗೆ ನೀರಾವರಿ ಸಚಿವರನ್ನಾಗಲಿ, ಸಲಹಾ ಸಮಿತಿ ಅಧ್ಯಕ್ಷರೂ ಹಾಗೂ ಸಚಿವರಾದ ಎಸ್.ಆರ್. ಪಾಟೀಲ್, ಕೆಬಿಜೆಎನ್ಎಲ್ನ ವ್ಯವಸ್ಥಾಪಕ ನಿರ್ದೇಶಕ ಕಪಿಲ್ ಮೋಹನ್ ಅವರನ್ನು ನಿಯೋಗದ ಮೂಲಕ ಭೇಟಿ ಮಾಡಿ ಒತ್ತಡ ಹೇರದಿರುವುದು ಆಶ್ಚರ್ಯಕರವಾಗಿದೆ. ಇನ್ನು ಮುಂದಾದರೂ ಕಾಲಕಾಲಕ್ಕೆ ಜಲಾಶಯಗಳ ನೀರಿನಮಟ್ಟವನ್ನು ಪ್ರತಿ ತಿಂಗಳಿಗೊಂದು ಬಾರಿ ಪತ್ರಿಕೆಗಳ ಮುಖಾಂತರ ಮಾಹಿತಿ ಒದಗಿಸಬೇಕಾಗಿದೆ.
ನೀರಾವರಿ ಸಲಹಾ ಸಮಿತಿ ಎಂದರೇನು? ಸಮಿತಿಯಲ್ಲಿರುವ ಸದಸ್ಯರು ಯಾರು, ಅವರ ಹೋಣೆಗಾರಿಕೆ ಏನು? ಎಂಬುದು ಈಗಲೂ ಗೊಂದಲಮಯವಾಗಿದೆ. ಕಾರಣ ಈ ಕುರಿತು ಸೂಕ್ತ ಮಾಹಿತಿಯನ್ನು ಪ್ರತಿಯೊಂದು ಗ್ರಾಮಕ್ಕೂ ತಲುಪಿಸಬೇಕು. ಈ ಗೊಂದಲಗಳಿಗೆ ಮುಕ್ತಿ ಹಾಡಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement