ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿವಿಧ ಕಾಮಗಾರಿಗೆ ಶಾಸಕ ಬಿಆರ್ಪಿ ಚಾಲನೆ

Rashmi Kasaragodu
Updated On : 13 Nov 2013, 11:58 am

ಆಳಂದ: ಆಳಂದ ತಾಲೂಕಿನ ಸರಸಂಬಾ ಸಿದ್ದಾರ್ಥ ನಗರದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕಬಿ.ಆರ್. ಪಾಟೀಲ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಸರ್ಕಾರದ ವಿಶೇಷ ಘಟಕ ಯೋಜನೆಯಡಿ ಹರಿಜನ ಬಡಾವಣೆಯಲ್ಲಿ ರಸ್ತೆ ನಿರ್ಮಿಸಲು 10 ಲಕ್ಷ ಮಂಜೂರಾಗಿದ್ದು, ಗುಣಮಟ್ಟದ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ತಿಳಿಸಿದರು.
ಹಿಂದುಳಿದವರು, ಬಡವರು ಸರ್ಕಾರದ ವಿವಿಧ ಸೌಲಭ್ಯ ಪಡೆದುಕೊಳ್ಳಬೇಕು. ಗ್ರಾಮದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಕುಡಿವ ನೀರಿನ ಸಮಸ್ಯೆ ಎದುರಾಗಿದ್ದು, ಶಾಶ್ವತ ಪರಿಹಾರಕ್ಕಾಗಿ ವಿಶ್ವ ಬ್ಯಾಂಕಿನ 1.20 ಕೋಟಿ ವೆಚ್ಚದ ಅನುದಾನದಲ್ಲಿ ವಾಡಿ ಕೆರೆ ಹತ್ತಿರ ಬಾವಿ ತೋಡಿ ಗ್ರಾಮಕ್ಕೆ ಕುಡಿವ ನೀರು ತರುವ ಯೋಜನೆ ಪ್ರಗತಿಯಲ್ಲಿದೆ ಎಂದರು.
ಅಂಗನವಾಡಿ ಕಟ್ಟಡ ಕಾಮಗಾರಿಗೆ ಗುದ್ದಲಿಪೂಜೆ: ಗ್ರಾಮಕ್ಕೆ ಪಪೂ ಕಾಲೇಜು ಅಲ್ಲದೇ ಪ್ರಥಮ ದರ್ಜೆ ಕಾಲೇಜು ಮಂಜೂರಾದರೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಆ ದಿಶೆಯಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರಲ್ಲದೆ, ತಾಪಂ ಅನುದಾನದಲ್ಲಿ ಮಂಜೂರಾದ 20 ಲಕ್ಷ ವೆಚ್ಚದ ಅಂಗನವಾಡಿ ಕಟ್ಟಡ ಕಾಮಗಾರಿಗೂ ಗುದ್ದಲಿಪೂಜೆಯನ್ನು ನೆರವೇರಿಸಿದರು. ಸಾರಾಯಿ ಮುಕ್ತ ಗ್ರಾಮವಾಗಿಸಲು ಜನರು ಸಹಕರಿಸುವಂತೆ ಕೋರಿದರು.
ಕಾಳಗಿ ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕ ಪಂಡಿತ ಕೊನಳ್ಳಿ, ಪಿಡಿಒ ವಿಲಾಸ ಪ್ರಸನ್ನ, ಶಿಕ್ಷಕ ಚಂದ್ರಕಾಂತ ಕಾಂಬಳೆ ಮಾತನಾಡಿ, ಬಡಾವಣೆಯ ಕೆಲ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.  ಗ್ರಾಪಂ ಅಧ್ಯಕ್ಷ ಗುರುನಾಥ ಮುಲಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೋಕೋಪಯೋಗಿ ಇಲಾಖೆ ಅಧಿಕಾರಿ ಸುನೀಲಕುಮಾರ್, ತಾಪಂ ಸದಸ್ಯೆ ಶಿವಲೀಲಾ ಹಾಲಬಾವಿ, ಆಕಾಶ ಪಾಟೀಲ್, ಗ್ರಾಪಂ ಸದಸ್ಯ ರಾಜಶೇಖರ ಪಾಟೀಲ್, ಮಹಾಂತಪ್ಪ ಆಲೂರೆ, ಗಂಗಾಬಾಯಿ ಈಶ್ವರ, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ್, ಪ್ರಮುಖರಾದ ಸಿದ್ದಾರಾಮ ಪಾಟೀಲ್, ಶಿವಶರಣಪ್ಪ ಪಾವಲೆ, ರೇಣುಕ ಸ್ವಾಮಿ, ಆರ್.ಕೆ. ಪಾಟೀಲ್, ಖಂಡಪ್ಪ ಮೇಲಿನಕೇರಿ, ರಾಮಲಿಂಗಪ್ಪ ಪಾಟೀಲ್, ಡಾ. ಅಬ್ದುಲ್ ಶೇಖ್, ರಮೇಶ ಭಕರೆ, ಬಸವರಾಜ ಚೌಲ್, ಅಪ್ಪಾಸಾಬ್ ಪಾಟೀಲ್ ಸೇರಿದಂತೆ ಇತರರು ಪಾಲ್ಗೊಂಡಿದರು.
ನಂತರ ಶಾಸಕರು ನಾಗಲೇಗಾಂವ, ಸಕ್ಕರಗಾ, ಕಿಣ್ಣಿ ಅಬ್ಬಾಸ, ಖಾನಾಪುರ ಹರಿಜನ ಬಡಾವಣೆಗಳಲ್ಲಿಯೂ ಗುದ್ದಲಿ ಪೂಜೆ ನೆರವೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement