ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಂಬಂಧ ಸೇತುವೆ ವೈಶಿಷ್ಟ್ಯಪೂರ್ಣ: ನ್ಯಾ. ಪಾಟೀಲ್

Rashmi Kasaragodu
Updated On : 13 Nov 2013, 11:56 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ನ.12
ಅಜ್ಜ- ಅಜ್ಜಿ, ಎನ್ನುವ ಬೇರಿಗೂ ಹಾಗೂ ಮೊಮ್ಮಕ್ಕಳೂ ಎನ್ನುವ ಚಿಗುರಿಗೂ ಸಂಬಂಧ ಸೇತುವೆಯೂ ವೈಶಿಷ್ಟಪೂರ್ಣವಾದ ಕಾರ್ಯಕ್ರಮ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ್ ತಿಳಿಸಿದರು.
  ನಗರದ ಸರ್ವಜ್ಞ ಹಾಗೂ ಡಾ. ಜಸ್ಟಿಸ್ ಶಿವರಾಜ ಪಾಟೀಲ್ ವಸತಿ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯಗಳ ಅಡಿಯಲ್ಲಿ ನಡೆಯುತ್ತಿರುವ ಸರ್ವಜ್ಞ ಚಿಣ್ಣರ ಲೋಕ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಹಳೇ- ಬೇರು ಹೊಸ ಚಿಗುರು ಎಂಬ ಅಜ್ಜ ಅಜ್ಜಿ ಹಾಗೂ ಮೊಮ್ಮಕ್ಕಳ ಸಮಾವೇಶವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿನೂತನ ಕಾರ್ಯಕ್ರಮ: ನಮ್ಮ ಹಿರಿಯರು ಗಟ್ಟಿಯಾಗಿರಲು ಅವರ ಶುದ್ಧ ಮನಸ್ಸು, ವಿಶಾಲ ಹೃದಯ, ಜೀವನದುದ್ದಕ್ಕೂ ಮೈಗೂಡಿಸಿಕೊಂಡ ಕಾಯಕ ನೀತಿಯೇ ಕಾರಣ. ಇದೊಂದು ಹೃದಯ ಮುಟ್ಟುವಂತಹ ವಿನೂತನ ಕಾರ್ಯಕ್ರಮ ಎಂದರು.
  ಮೊಮ್ಮಕ್ಕಳ ಜೊತೆ ಹಿರಿಯ ಜೀವಿಗಳು ಸತ್ಕಾರ ಪಡೆದುಕೊಳ್ಳುವಾಗಿನ ಸಂತೋಷ ಜೀವನದಲ್ಲಿ ಮರೆಯಲಾರದ ಕ್ಷಣವಾಗಿದೆ. ಇದು ಪ್ರೀತಿ ಬಾಂಧವ್ಯದಿಂದ ಮಾತ್ರ ಪಡೆಯಲು ಸಾಧ್ಯ ಎಂದರು.
  ವಿಶ್ವವಿದ್ಯಾಲಯಗಳಿಂದ ಪದವಿಗಳು, ಗೋಲ್ಡ್ ಮೆಡಲ್, ರ್ಯಾಂಕ್ಗಳನ್ನು ಪಡೆದವರಲ್ಲಿ ಮಾನವೀಯತೆ ಇಲ್ಲದಿದ್ದರೆ ಪ್ರಯೋಜನವಿಲ್ಲ. ಆದ್ದರಿಂದ ಮೌಲ್ಯಾಧಾರಿತ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವಂತಹ ಕೆಲಸವನ್ನು ಇಂದು ಶಾಲಾ- ಕಾಲೇಜು ಮಾಡಬೇಕು ಎಂದರು.
ಹಿರಿಯರಿಂದ ಸಮಸ್ಯೆಗಳು ಕಡಿಮೆ: ಸಂಸ್ಥೆಯ ಅಧ್ಯಕ್ಷೆ ಗೀತಾ ಚನ್ನಾರಡ್ಡಿ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ, ಹಿರಿಯರಿಲ್ಲದ ಕುಟುಂಬಗಳು  ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ನಾವು ನೋಡಿದ್ದೇವೆ. ಹಿರಿಯರು ಇದ್ದ ಕುಟುಂಬದಲ್ಲಿ ಸಮಸ್ಯೆಗಳು ಕಡಿಮೆ. ಅವರ ಮಾರ್ಗದರ್ಶನ ಜೀವನ ಅನುಭವ ಇಂದಿನ ಯುವ ಜನಾಂಗಕ್ಕೆ ಅಗತ್ಯ ಎಂಬುದನ್ನು ಮಕ್ಕಳಿಗೆ ತಿಳಿಸುವ ಹಿನ್ನಲೆಯಲ್ಲಿ ನೂತನವಾಗಿ ಅಜ್ಜ- ಅಜ್ಜಿ ಮೊಮ್ಮಕ್ಕಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
  ಖ್ಯಾತ ಉದ್ಯಮಿಗಳಾದ ಎಸ್.ಎಸ್. ಪಾಟೀಲ ಕಡಗಂಚಿ, ಹಿರಿಯ ನೇತ್ರ ತಜ್ಞಾರಾದ ಡಾ. ದೇವೇಂದ್ರಪ್ಪ ಚಿಂಚೊಳಿ, ನಿವೃತ್ತ ಶಿಕ್ಷಕ ರಾಷ್ಟ್ರಪ್ರಶಸ್ತಿ ಪುರಸ್ಕೃತ ದೇವೆಂದ್ರಪ್ಪ ಬಡಿಗೇರ ಅವರು ಅಜ್ಜ- ಅಜ್ಜಿ- ಮೊಮ್ಮಕ್ಕಳ ಪ್ರೀತಿ ವಾತ್ಸಲ್ಯ ಬಾಂಧವ್ಯದ ಕುರಿತು ಮಾತನಾಡಿದರು.
  ಪ್ರಾಚಾರ್ಯ ಡಾ. ಸಂತೋಷಕುಮಾರ್, ಕರುಣೇಶ ಬಿ.ಎಚ್, ಪೃತ್ವಿರಾಜ ಗೌಡ, ಪ್ರಶಾಂತ ಕುಲಕರ್ಣಿ, ನಗರದ ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಸಂಸ್ಥಾಪಕ ಪ್ರೊ. ಚನ್ನಾರಡ್ಡಿ ಪಾಟೀಲ್ ಸ್ವಾಗತಿಸಿದರು. ಡಾ. ವಿದ್ಯಾವತಿ ಪಾಟೀಲ್ ನಿರೂಪಿಸಿದರು. ನಿಖಿಲ್ ಪ್ರಾರ್ಥಿಸಿದರು.
  ಇದೇ ಸಂದರ್ಭದಲ್ಲಿ ಹಿರಿಯರಾದ ಸ್ವಾತಂತ್ರ ಹೋರಾಟಗಾರ ನಿಂಗಪ್ಪ ಮೂಲಗೆ ದಂಪತಿಗಳು, ಜಿ.ಕೆ. ಮರಿಗೌಡ ದಂಪತಿಗಳು, ಗುಡೇರಾವ ಪಾಟೀಲ್ ದಂಪತಿಗಳು, ದೇವೇಂದ್ರಪ್ಪ ಬಡಿಗೇರ ದಂಪತಿಗಳನ್ನು ಸನ್ಮಾನಿಸಲಾಯಿತು. ನಂತರ ಅಜ್ಜ- ಅಜ್ಜಿ ಮೊಮ್ಮಕ್ಕಳಿಗಾಗಿ ವಿವಿಧ ರೀತಿಯ ಆಟೋಟಗಳಲ್ಲಿ, ಮನೋರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯುವಕರನ್ನು ನಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement