ಕಾನೂನು ಅರ್ಥಮಾಡಿಕೊಂಡರೆ ಜೀವನ ಸುಗಮ
ಆಳಂದ: ಪ್ರಸಕ್ತ ದಿನಗಳಲ್ಲಿ ಪ್ರತಿಯೊಬ್ಬರು ಕಾನೂನು ತಿಳಿದುಕೊಳ್ಳಬೇಕೆಂದು ಸರ್ಕಾರಿ ವಕೀಲ ಶರಣಗೌಡ ಪಾಟೀಲ್ ಹೇಳಿದರು.
ಪಟ್ಟಣದ ನೇಕಾರ ಕಾಲೋನಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ನಡೆದ ಸಾಕ್ಷರ ರಥ ಪ್ರವಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾನೂನು ಅರಿವಿಲ್ಲದೆ ಕೋರ್ಟ್ಗೆ ಅಲೆದು ಜನರು ಸಮಯ ಹಾಗೂ ಹಣವನ್ನು ವ್ಯರ್ಥ ಹಾಳುಮಾಡಿಕೊಳ್ಳಬಾರದು. ಇಂದು ಎಲ್ಲರಿಗೂ ಮುಖ್ಯವಾಗಿ ಜಾಗೃತಿ ಮತ್ತು ತಿಳಿವಳಕೆ ಅಗತ್ಯ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಿಪಿಐ ಕೆ.ಎಸ್. ಹಟ್ಟಿ ಮಾತನಾಡಿ, ಕಾನೂನು ಅರಿವಿಲ್ಲದೆ ಸಣ್ಣ, ಪುಟ್ಟ ಕಲಹ ಉಂಟಾಗಿ ಅಪರಾಧಕ್ಕೆ ಕಾರಣವಾಗುತ್ತಿವೆ. ಒಳ್ಳೆಯ ನಾಗಕರಿಕನಾಗಿ ಕಾನೂನು ತಿಳಿಯಬೇಕು ಎಂದರು.
ಸರ್ಕಾರದಿಂದ ಮಕ್ಕಳಿಗೆ ದೊರೆವ ಸೌಲಭ್ಯ ಕುರಿತು ಕೆ.ಯು. ಇನಾಮನದಾರ ಮತ್ತು ಗುರು ಶಿಷ್ಯರ ಸಂಬಂಧ ಕುರಿತು ಬಿ.ವಿ. ಆಪ್ಟೆ ಉಪನ್ಯಾಸ ಮಂಡಿಸಿದರು. ಮುಖ್ಯಗುರು ಸಿದ್ರಾಮಪ್ಪ ಸನಗುಂದಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ಕೋಭಾಳಕರ್, ನ್ಯಾಯವಾದಿ ಸಂಘದ ಅಧ್ಯಕ್ಷ ಎಸ್.ಡಿ.ಬೋಸಗೆ, ಪ್ರಧಾನ ಕಾರ್ಯದರ್ಶಿ ಸ್ವಾಮಿರಾವ ಚನ್ನಗುಂಡ, ಪಿಎಸ್ಐ ಮಹಾದೇವ ಪಂಚಮುಖಿ, ನ್ಯಾಯವಾದಿ ಶಿವಶಂಕರ ಮುನ್ನಹಳ್ಳಿ, ದೀಪಾರಾಣಿ ಪಾಟೀಲ್, ಪುರಸಭೆ ಸದಸ್ಯ ಅಬ್ದುಲ್ ವಹೀದ್ ಜರ್ದಿ, ಮಲ್ಲಿನಾಥ ಮಡ್ಡೆ, ಸಿದ್ಧರೂಢ ಸನಗುಂದಿ ಉಪಸ್ಥಿತರಿದ್ದರು.