ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತಮ್ಮ ಕೆಲಸಗಳತ್ತ ವಾಲ್ಮೀಕಿ ಚಿಂತಿಸಲಿ

Rashmi Kasaragodu
Updated On : 14 Nov 2013, 12:40 pm

ಚಿತ್ತಾಪುರ: ಆರೋಪ ಮಾಡುವ ಮೊದಲು ತಮ್ಮ ಅವಧಿಯಲ್ಲಿ ಆಗಿರುವ ಕೆಲಸಗಳ ಬಗ್ಗೆ ಪರೀಶೀಲಿಸಿ ನಂತರ ಆರೋಪ ಮಾಡಬೇಕೆಂದು ಶಾಸಕ ಪ್ರಿಯಾಂಕ ಖರ್ಗೆ ಅವರು ಮಾಜಿ ಶಾಸಕ ವಾಲ್ಮೀಕಿ ನಾಯಕ ವಿರುದ್ಧ ವಾಗ್ದಾಳಿ ಮಾಡಿದರು.
ತಾಲೂಕಿನ ಭೀಮನಹಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ತಮ್ಮ ಅವಧಿಯಲ್ಲಿ ಮತಕ್ಷೇತ್ರದಲ್ಲಿ 12 ಸಾವಿರ ವಸತಿಗಳು ಮಂಜೂರಾಗಿವೆ ಎಂದು ವಾಲ್ಮೀಕಿ ನಾಯಕ ಅವರು ಸುಳ್ಳು ಹೇಳಿದ್ದಾರೆ ಎಂದು ಪ್ರಿಯಾಂಕ ಆರೋಪಿಸಿದರು.
ಪ್ರಸ್ತಾವನೆ ಸಲ್ಲಿಸಿದ್ದೇ 2 ಸಾವಿರ ವಸತಿಗೆ: ಮತಕ್ಷೇತ್ರಕ್ಕೆ ಸರ್ಕಾರ ನಿಗದಿ ಮಾಡಿದ್ದು 4 ಸಾವಿರ ವಸತಿ. ಆದರೆ 2 ಸಾವಿರ ವಸತಿಗಳ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪೈಕಿ ಕೇವಲ 1,300ರಷ್ಟು ವಸತಿಗಳು ಮಂಜೂರಾಗಿವೆ. ಇದಕ್ಕೆ ಅನುದಾನ 1.50 ಕೋಟಿಯಲ್ಲಿ ಕೇವಲ 12 ಲಕ್ಷ ಖರ್ಚು ಮಾಡಿದ್ದನ್ನು ನೋಡಿದರೆ ಇವರ ಸಾಧನೆ ಗೊತ್ತಾಗುತ್ತದೆ ಎಂದು ವ್ಯಂಗವಾಡಿದರು.
ಕೆಡಿಪಿ ಸಭೆಗೆ ಕಳೆದ 4 ವರ್ಷದಿಂದ ಭೂಸೇನಾ ನಿಗಮ ಹಾಗೂ ಕೆಲ ಇಲಾಖೆ ಅಧಿಕಾರಿಗಳು ಸತತ ಗೈರಾಗಿದ್ದರು. ಅಧಿಕಾರಿಗಳು ವಾಲ್ಮೀಕಿ ಹಿಡಿತದಲ್ಲಿರಲಿಲ್ಲ. ಇಂದು ಎಲ್ಲ ಅಧಿಕಾರಿಗಳು ಸಭೆಗೆ ಹಾಜರಾಗಿ ಉತ್ತಮ ಕೆಲಸ ಮಾಡುವ ಮೂಲಕ ಅಧಿಕಾರಿಗಳು ಹಿಡಿತದಲ್ಲಿದ್ದಾರೆ ಎಂದು ಹೇಳಿದರು.
ದಾರಿ ತಪ್ಪಿಸುವ ಕಾರ್ಯ: ಜನಪ್ರತಿನಿಧಿಗಳಾದವರು ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕು. ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತ ಕ್ಷೇತ್ರದ ಮಗನಾಗಿ ದುಡಿಯುವೆ. ಶಾಸಕರ ಅನುದಾನ ಅಲ್ಲದೇ ಕೇಂದ್ರ- ರಾಜ್ಯ ಸರ್ಕಾರಗಳ ವಿಶೇಷ ಅನುದಾನ ತಂದು ಅಭಿವೃದ್ಧಿ ಮಾಡಲಾಗುತ್ತಿದೆ. ಇದನ್ನು ಅರಿಯದ ಪ್ರತಿಪಕ್ಷದವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಶಾಂತಪ್ಪ ಚಾಳಿಕರ, ಕೆನರಾ ಬ್ಯಾಂಕ್ ಆರ್ಥಿಕ ಸಲಹೆಗಾರ ರತಿಕಕುಮಾರ ಮಾತನಾಡಿದರು.
ಮುಖಂಡರಾದ ಸೋಮಶೇಖರ ಪಾಟೀಲ್ ಬೆಳಗುಂಪಾ, ವಿರುಪಾಕ್ಷಿ ಗಡ್ಡದ, ಶೀಲಾ ಕಾಶಿ, ಸುಭಾಷ ಪಸಾರ, ಮುಕ್ತಾರ ಪಟೇಲ್, ಅಬ್ದುಲ್ ರಶೀದ್, ಹಣಮಂತ ಪ್ರಜಾರಿ, ಬಸಣ್ಣಗೌಡ, ಮಲ್ಲಣ್ಣಗೌಡ ಯಾಗಾಪುರ, ಯಂಕಾರೆಡ್ಡಿ ರಾಮತೀರ್ಥ, ರವಿಕುಮಾರ, ಯಂಕಪ್ಪ ಜೋಲಕರ, ಬಸವರಾಜ, ಗ್ರಾಪಂ ಅಧ್ಯಕ್ಷ ಸಾಬಣ್ಣ ಜಡಿ ವೇದಿಕೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement