ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಶು ವೈದ್ಯರ ನೇಮಕಕ್ಕೆ ರೈತರ ಒತ್ತಾಯ

Rashmi Kasaragodu
Updated On : 14 Nov 2013, 12:40 pm

ಚಿತ್ತಾಪುರ: ತಾಲೂಕಿನ ಪಶು ಚಿಕಿತ್ಸಾಲದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವುದರಿಂದ ಹಾಗೂ ಇದ್ದ ಸಿಬ್ಬಂದಿ ಸರಿಯಾಗಿ ಕೆಲಸ ಮಾಡದೇ ಇರುವುದರಿಂದ ಜಾನುವಾರುಗಳ ಚಿಕಿತ್ಸೆಗೆ ಬಹಳ ತೊಂದರೆಯಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಚಿತ್ತಾಪುರ ತಾಲೂಕು ರಾಜ್ಯದಲ್ಲಿಯೇ ದೊಡ್ಡ ತಾಲೂಕು ಕೇಂದ್ರಗಳಲ್ಲಿ ಒಂದಾಗಿದ್ದು, 3 ವಿಧಾನಸಭೆ ಕ್ಷೇತ್ರವನ್ನು ಒಳಗೊಂಡಿರುವ ತಾಲೂಕು ಕೇಂದ್ರವಾಗಿದೆ. ಇಲ್ಲಿನ ಪ್ರಮುಖ ಉದ್ಯೋಗ ವ್ಯವಸಾಯವಾಗಿರುವುದರಿಂದ ಇಲ್ಲಿ ತುಸು ಹೆಚ್ಚು ಜಾನುವಾರುಗಳು ಇವೆ. ಆದರೆ ಇಲ್ಲಿ   ಆರೈಕೆ ಮಾಡಲು ವೈದ್ಯರ ಕೊರತೆ ಇರುವುದರಿಂದ ಜಾನುವಾರಗಳು ತೊಂದರೆ ಪಡುವಂತಾಗಿದೆ.
60ಕ್ಕೂ ಹೆಚ್ಚಿನ ಸಿಬ್ಬಂದಿ ಕೊರತೆ: ಜಾನುವಾರುಗಳಿಗೆ ಭಾದೆಯಾಗುವುದರಿಂದ ತಾಲೂಕಿನಲ್ಲಿ 60ಕ್ಕೂ ಹೆಚ್ಚಿನ ಸಿಬ್ಬಂದಿ ಕೊರತೆಯಿಂದ ಚಿಕಿತ್ಸೆ ಸರಿಯಾಗಿ ಸಿಗದೆ ಇರುವುದರಿಂದ ಅನೇಕ ಜಾನುವಾರುಗಳು ಜೀವ ಕಳೆದುಕೊಂಡ ಪ್ರಸಂಗಗಳಿವೆ.  ಶಾಸಕರು ತಾಲೂಕಿನ ರೈತರಿಗೆ ಸಂಜೀವಿನಿಯಾಗಿರುವ ಪಶು ಚಿಕಿತ್ಸಾಲಕ್ಕೆ ಖಾಲಿ ಇರುವ ಸಿಬ್ಬಂದಿಯನ್ನು ನೇಮಿಸಿದಲ್ಲಿ ಲಕ್ಷಾಂತರ ಜಾನುವಾರುಗಳಿಗೆ ಆರೋಗ್ಯ ನೀಡಿದಂತೆ ಆಗುತ್ತದೆ ಎಂದು ರೈತರಾದ ಬಸವರಾಜ ಗೌಡ ಹೋನ್ನಾಳ, ಅಯ್ಯಣ್ಣ ಗಢೇಸುರ, ಭೀಮಣ್ಣ ಡೆಂಗಿ, ಅಶೋಕ ಸಿಂಪಿ, ಸಿದ್ರಾಮರೆಡ್ಡಿ ಪಾಲಪ, ಚಂದ್ರು ದಿಗ್ಗಾಂವ, ಸಿದ್ದಣ್ಣ ತೋನಸನಹಳ್ಳಿ  ಮತ್ತಿತರ ರೈತರು ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement