ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಭವನ ಕಾಮಗಾರಿ ಶಿಥಿಲ

Rashmi Kasaragodu
Updated On : 14 Nov 2013, 12:41 pm

ಚಿತ್ತಾಪುರ: ಪಟ್ಟಣದ ಹೃದಯ ಭಾಗವಾದ ತಾಲೂಕು ಕಚೇರಿ ಪಕ್ಕದಲ್ಲಿ ನಿರ್ಮಿಸಲಾದ ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿ ಪೂರ್ಣಗೊಳ್ಳದೆ ಶಿಥಿಲಗೊಂಡು ಉಪಯೋಗಕ್ಕೆ ಬಾರದೇ ಇರುವುದರಿಂದ ದಲಿತ ಸಮುದಾಯದಲ್ಲಿ ಅಸಮಾಧಾನ ಮೂಡಿಸಿದೆ.
ದಲಿತ ಸಮುದಾಯಗಳ ಜನರು ಶುಭ ಕಾರ್ಯಗಳಿಗೆ ಬಳಸಿಕೊಳ್ಳುವ ಉದ್ದೇಶದಿಂದ ನಿರ್ಮಿಸಲಾದ ಸಮುದಾಯ ಭವನ ಕೇವಲ ಮಳೆ, ಬಿಸಿಲು, ಗಾಳಿಗೆ ಮೈಯೊಡ್ಡಿ ನಿಂತಿರುವುದನ್ನು ಬಿಟ್ಟರೆ ಬೇರೆ ಯಾವ ಸಕಾರಾತ್ಮಕ ಕಾರ್ಯಕ್ಕೂ ಅದು ಬಳಕೆಯಾಗುತ್ತಿಲ್ಲ, ಇದರಿಂದ ಸರ್ಕಾರದ ಅನುದಾನ ಪೋಲಾಗುವಂತೆ ಮಾಡಿದಂತೆ ಅಲ್ಲದೆ ಇದು ಸಮುದಾಯಕ್ಕೆ ಯಾವುದೇ ಉಪಯೋಗಕ್ಕಿಲ್ಲ ಎನ್ನುವ ಬೇಸರ ಇಲ್ಲಿನ ಪ್ರಜ್ಞಾವಂತ ಜನರನ್ನು ಕಾಡುತ್ತಿದೆ.
ಕಟ್ಟಡ ನಿರ್ಮಿಸಿ ಹತ್ತಾರು ವರ್ಷಗಳು ಕಳೆದರೂ ಬಳಕೆಯಾಗದೆ ಇರುವುದರಿಂದ ಬಾಗಿಲು, ಕಿಟಕಿಗಳು ಒಡೆದು ಹಾಳಾಗಿದ್ದು, ವಿದ್ಯುತ್ ಸಂಪರ್ಕ ಇಲ್ಲದೆ ಇರುವುದರಿಂದ ಸುತ್ತಮುತ್ತಲು ತಿಪ್ಪೆಗುಂಡಿ ಹಾಗೂ ಬೆಳೆದು ನಿಂತಿರುವ ಹುಲ್ಲು ಹಾಗೂ ಜಾಲಿ ಕಂಟಿಯಿಂದ ವಿಷ ಜಂತುಗಳ ತಾಣವಾಗಿ ಮಾರ್ಪಟ್ಟಿದೆ.
ಈ ಬಗ್ಗೆ ಕಾಳಜಿ ವಹಿಸಬೇಕಾಗಿದ್ದ ಸಮಾಜ ಕಲ್ಯಾಣ ಇಲಾಖೆ ಇದರ ದಾಖಲೆಗಳು ನಮ್ಮಲ್ಲಿ ಇಲ್ಲದೆ ಇರುವುದರಿಂದ ನಾವು ಏನು ಮಾಡಲು ಆಗುತ್ತಿಲ್ಲ ಎಂಬ ಕುಂಟು ನೆಪ ಹೇಳಿ ಜಾರಿಕೊಳ್ಳುತ್ತಿರುವರು ಇಲ್ಲಿನ ಅಧಿಕಾರಿಗಳು.
ಈಗಲಾಗದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಕಟ್ಟಡದ ಮುಂಭಾಗ ಹಾಗೂ ಅಕ್ಕ ಪಕ್ಕದಲ್ಲಿ ಬೆಳೆದಿರುವ ತಿಪ್ಪೆಗುಂಡಿ ಹಾಗೂ ಗಿಡ- ಗಂಟೆಯನ್ನು ಕಡಿದು ಅಂಬೇಡ್ಕರ್ ಭವನದ ಉಪಯೋಗವನ್ನು ದಲಿತ ಸಮುದಾಯ ಪಡೆದುಕೊಳ್ಳಲು ಅನುವುಮಾಡಿಕೊಡಬೇಕೆಂದು ದಲಿತ ಸಮುದಾಯ ಒತ್ತಾಯಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement