ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮರಳಸಿದ್ಧೇಶ್ವರ ದೇವಸ್ಥಾನದಲ್ಲಿ ದೀಪೋತ್ಸವ

Rashmi Kasaragodu
Updated On : 14 Nov 2013, 12:40 pm

ಚಿತ್ತಾಪುರ: ಪಟ್ಟಣದ ಮರಳಸಿದ್ಧೇಶ್ವರ ದೇವಸ್ಥಾನದಲ್ಲಿ ಶ್ರೀಶೈಲ್ ಮಲ್ಲಿಕಾರ್ಜುನ ಮಹಿಳಾ ಭಜನಾ ಮಂಡಳಿ ಹಾಗೂ ಅಕ್ಕಮಹಾದೇವಿ ಮಹಿಳಾ ಭಜನಾ ಮಂಡಳಿ ವತಿಯಿಂದ ದೀಪೋತ್ಸವ ಕಾರ್ಯಕ್ರಮ ನಡೆಯಿತು.
ಪ್ರತಿ ವರ್ಷದಂತೆ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕಾಳಗಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಭಕ್ತರು ದೇವಸ್ಥಾನಕ್ಕೆ ದೀಪಾಲಂಕರ ಮಾಡಿದ ನಂತರ ಮಹಿಳಾ ಮಂಡಳದವರು ದೇವರ ಭಜನೆ ಮೂಲಕ ಹಾಡಿದರು. ಮಕ್ಕಳು ದೀಪಗಳನ್ನು ಹಚ್ಚಿ ಸಂಭ್ರಮ ಪಟ್ಟರು.
ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಬಸವರಾಜ ಸ್ವಾಟಿ, ಭಕ್ತರಾದ ಚಂದ್ರಶೇಖರ ಶಟ್ಟಿ, ಅಂಬ್ರೀಶ ಸುಲೇಗಾಂವ, ಸೂರ್ಯಕಾಂತ ಹಾವೇರಿ, ಶಿವಣ್ಣ ದೊಡ್ಮನಿ, ದೇವಿಂದ್ರಪ್ಪ ದುದಗಿ, ಭೀಮರಾವ ಧರಪುರ, ಚಂದ್ರಶೇಖರ ಸುಲೇಗಾಂವ ಹಾಗೂ ವಿವಿಧ ಮಹಿಳಾ ಸಂಘದವರು ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement