30 ಹೊಲಿಗೆ ಯಂತ್ರ ವಿತರಣೆ
ಸುರಪುರ: ತಾಲೂಕಿನ ದೇವಪುರ ಗ್ರಾಮದಲ್ಲಿ ತಾಲೂಕಿನ ಕೃಷ್ಣ ಮೇಲ್ದಂಡೆ ಕಮ್ಮ ವಾರಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ರಾಜಾ ವೆಂಕಟಪ್ಪನಾಯಕ ಬಡ ಹೆಣ್ಣು ಮಕ್ಕಳಿಗೆ ಹೊಲಿಗೆ ಯಂತ್ರ ವಿತರಿಸಿದರು. ತಾಲೂಕಿನ ಕಮ್ಮ ವಾರಿ ಸಂಘವು ಕಾರ್ತಿಕ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ವನ ಮಹೋತ್ಸವ ಎಂಬ ಕಾರ್ಯಕ್ರಮ ಆಯೋಜಿಸಿತ್ತು. ಶಾಸಕ ರಾಜಾ ವೆಂಕಟಪ್ಪನಾಯಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಮ್ಮ ವಾರಿ ಸಮಾಜದ 30 ಬಡ ಹೆಣ್ಣು ಮಕ್ಕಳಿಗೆ ಉಚಿತ ಹೊಲಿಗೆ ಯಂತ್ರ ನೀಡಿದರು. ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿದರು. ಸಂಘದ ಅಧ್ಯಕ್ಷ ವೆಂಕಟರಾವ್, ಎ. ಸುಬ್ಬರಾವ್, ಹರೀಶ್ಚಂದ್ರ ಪ್ರಸಾದ, ಕೃಷ್ಣ, ಮೋಹನ ರೆಡ್ಡಿ, ಮೋಹನರಾವ, ಶ್ರೀನಿವಾಸ, ತಿರುಪತಿ ಅಯ್ಯ, ಪ್ರಮುಖರಾದ ಸೂಲಪ್ಪ ಕಮತಗಿ, ವೆಂಕೋಬ ಮಂಗಳೂರು, ರಾಜಾ ವೇಣೂಗೋಪಾಲ ಇನ್ನಿತರರಿದ್ದರು.