ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಉತ್ಥಾನ ದ್ವಾದಸಿ: ಸಂಭ್ರಮದ ತುಳಸಿ ವಿವಾಹ

Mainashree
Updated On : 15 Nov 2013, 12:46 pm

ಹುಣಸಗಿ: ಕಾರ್ತಿಕ ಮಾಸದಲ್ಲಿ ನಿತ್ಯ ಬೆಳಿಗ್ಗೆ ತುಳಸಿ ಪೂಜೆ ಮಾಡುವುದರಿಂದ ಇಷ್ಟಾರ್ಥ ಲಭಿಸುತ್ತದೆ. ಶ್ರೀಕೃಷ್ಣನಿಗೆ ಇಷ್ಟವಾದದ್ದು ತುಳಸಿ ಎಂದು ಕಿಷನ್ ರಾವ ಕುಲಕರ್ಣಿ ತಿಳಿಸಿದರು.
ಉತ್ಥಾನ ದ್ವಾದಸಿ ಪ್ರಯುಕ್ತ ಗುರುವಾರ ಹುಣಸಗಿ ಸಮೀಪದ ವಜ್ಜಲ್ ಗ್ರಾಮದಲ್ಲಿ ತುಳಸಿ ದಾಮೋದರ ವಿವಾಹದ ನಂತರ ತುಳಸಿ ಮಹತ್ವ ಕುರಿತು ತಿಳಿಸಿದರು.
ರೋಗಗಳು ಗುಣಮುಖ: ವೈಜ್ಞಾನಿಕ ದೃಷ್ಟಿಯಿಂದಲೂ ತುಳಸಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಬೆಳಗ್ಗೆ ಪೂಜೆ ಸಲ್ಲಿಸಿ, ಒಂದು ದಳ ತುಳಸಿ ಸೇವನೆಯಿಂದ ಹಲವಾರು ರೋಗಗಳು ಗುಣ ಮುಖವಾಗುತ್ತದೆ. ಅಲ್ಲದೆ ಮೈಕಾಂತಿ ಹೆಚ್ಚಾಗುತ್ತದೆ. ತುಳಸಿಯ ಎಲೆ ಕಾಷ್ಟ, ಮೃತ್ಯುಕಾ ಸೇರಿದಂತೆ ಎಲ್ಲವೂ ಉಪಯುಕ್ತ ಆದ್ದರಿಂದ ಮನೆಯ ಮುಂದೆ ತುಳಸಿ ಇರುವುದು ಉತ್ತಮ. ಕೃಷ್ಣನಿಗೆ ಎಲ್ಲ ಸಂಪತ್ತು ಅರ್ಪಿಸಿದರೂ ತಕ್ಕಡಿ ಮೇಲೆಳಲಿಲ್ಲ. ಅದರಲ್ಲಿ ಒಂದು ದಳ ತುಳಿಸಿ ಇಟ್ಟು ಕೃಷ್ಣಾರ್ಪಣ ಎಂದಾಗ ತಕ್ಕಡಿ ಮೇಲಕ್ಕೆ ಬಂತು. ಅದಕ್ಕಾಗಿ ದೇವರಿಗೆ ಪ್ರಿಯವಾದದ್ದು ತುಳಸಿ. ಅದಕ್ಕಾಗಿ ತುಳಿಸಿಗೆ ಪೂಜನೀಯ ಸ್ಥಾನವಿದೆ. ನಿತ್ಯ ತುಳಸಿ ಪೂಜೆ, ದೀಪಾರಾಧನೆಯಿಂದ ಸಕಲ ಪಾಪ ಪರಿಹಾರವಾಗುತ್ತದೆ ಎಂದು ವಿವರಿಸಿದರು.
ಉಡಿ ತುಂಬುವ ಕಾರ್ಯಕ್ರಮ: ತುಳಸಿ ವಿವಾಹ ಸಂಭ್ರಮದಿಂದ ನಡೆಯಿತು. ನೂರಾರು ಜನರು ಪಾಲ್ಗೊಂಡಿದ್ದರು. ವಿವಾಹದ ನಂತರ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಶತ ದೀಪಗಳಿಂದ ಅಲಂಕರಿಸಲಾಗಿತ್ತು. ರಾಧಾಬಾಯಿ ಕುಲಕರ್ಣಿ, ಪದ್ಮಾವತಿ ಕುಲಕರ್ಣಿ, ಸುಧಾ ಕುಲಕರ್ಣಿ, ಸಂಗೀತಾ, ಸಂಜನಾ, ಮಲ್ಲಮ್ಮ ಅಮಲಿಹಾಳ, ಸುಮೀತಾ ಪಾಟೀಲ, ರೇಣುಕಾ ಪಾಟೀಲ, ಮಾನಮ್ಮ ಬಡಿಗೇರ, ಗುರುಬಾಯಿ ನಾಯ್ಕಲ್ ಸೇರಿದಂತೆ ಇತರರು ಇದ್ದರು. ಹುಣಸಗಿ, ಕೊಡೇಕಲ್ಲ, ನಾರಾಯಣಪುರ, ಕಾಮನಟಗಿ ಸೇರಿದಂತೆ ಇತರ ಗ್ರಾಮಗಳಲ್ಲಿ ತುಳಸಿ ವಿವಾಹ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement