ಗ್ರಂಥಾಲಯ ಸಪ್ತಾಹ ಆಚರಣೆ
ಸುರಪುರ: ಇಲ್ಲಿಯ ಗ್ರಂಥಾಲಯದಲ್ಲಿ ಗುರುವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಿಸಲಾಯಿತು. ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ ಜ್ಯೋತಿ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಯಾದಗಿರಿ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎ. ಕೃಷ್ಣ ಸುರಪುರ ಮಾತನಾಡಿ, ಗ್ರಂಥಾಲಯಗಳು ನಾಗರಿಕರ ಜ್ಞಾನ ಹೆಚ್ಚಿಸುವ ದೇಗುಲುಗಳು. ಇಲ್ಲಿ ಲಭ್ಯವಾಗುವ ಪತ್ರಿಕೆ, ನಾನಾ ಪುಸ್ತಕಗಳಿಂದ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ಪುರಸಭೆ ಸದಸ್ಯ ಭೀಮಾಶಂಕರ ಬಿಲ್ಲವ್ ಮಾತನಾಡಿ, ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಗ್ರಂಥಾಲಯದ ಸ್ನೇಹ ಬೆಳಸಬೇಕೆಂದು ಕರೆ ನೀಡಿದರು. ತಾಲೂಕು ಗ್ರಂಥಾಲಯ ಸಹಾಯಕ ವನಕೆರಪ್ಪ ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ವಿಪ ನಾಯಕ ವೇಣೂಮಾಧವ ನಾಯಕ, ಸದಸ್ಯ ವೆಂಕಟೇಶ ಆಲ್ಟಿ, ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ್ಣೀಗೇರಾ, ಆರ್‌ಒ ಆದಪ್ಪ ಸುರಪುರಕರ್, ಓದುಗರಾದ ಲಕ್ಷ್ಮೀಸಾಗರ ನಾಯಕ, ನಿಂಗಯ್ಯ ಕಿಲ್ಲೇದಾರ, ವೀರಯ್ಯ ಸ್ವಾಮಿ, ಗದ್ದೆಪ್ಪ ಕೋನಾಳ, ಕಿರಣ ಸ್ವಾಮಿ ಇನ್ನಿತರರಿದ್ದರು. ಲಕ್ಷ್ಮೀಕಾಂತ ಚಂದ್ರಗಿತಿ ಸ್ವಾಗತಿಸಿದರು. ಹಣಮಂತ ಮಿಲ್ಟ್ರಿ ನಿರೂಪಿಸಿದರು. ದತ್ತುರಾವ ಕುಲಕರ್ಣಿ ವಂದಿಸಿದರು.