ನೇಮಕಾತಿಯಲ್ಲಿ ಅಕ್ರಮ; ದೂರು
ಚಿಂಚೋಳಿ: ಪಟ್ಟಣದ ಚಂದಾಪುರ ನಗರದಲ್ಲಿರುವ ಸರ್ಕಾರಿ ಪಪೂ ಕಾಲೇಜಿನಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆಯ ಮುಖ್ಯ ಅಡುಗೆಯ ಮೇಲ್ವಿಚಾರಕಿಯರ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ಪಪಂ ಸದಸ್ಯೆ ನರಸಮ್ಮ ವಿಜಯಕುಮಾರ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.ಪಪಂ ವ್ಯಾಪ್ತಿಯ ಚಂದಾಪುರ ನಗರದಲ್ಲಿರುವ ಕಾಲೇಜಿನಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆ ಅಡಿಯಲ್ಲಿ ಅಡುಗೆ ಸೇರಿದಂತೆ ಅಡುಗೆ ಸಹಾಯಕಿಯರ ಹುದ್ದೆಗಳಿಗೆ ಅ. 28ರಂದು ಸಂದರ್ಶನ ಕರೆಯಲಾಗಿತ್ತು.
ನೊಂದ ಮಹಿಳೆಯರಿಗೆ ಆದ್ಯತ ನೀಡಲು ಪಪಂ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಮುಖ್ಯಗುರುಗಳು ಹಾಗೂ ಮುಖ್ಯಾಧಿಕಾರಿಗಳು ಮನ್ನಣೆ ನೀಡದೇ ಭಾರಿ ಅಕ್ರಮ ನಡೆಸಿದ್ದಾರೆ. ಕೂಡಲೇ ನೇಮಕಾತಿ ನಿಲ್ಲಿಸಬೇಕೆಂದು ಪಪಂ ಸದಸ್ಯೆ ನರಸಮ್ಮ ವಿಜಯಕುಮಾರ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.