ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದುಪಡಿಸಲು ಆಗ್ರಹ

Mainashree
Updated On : 15 Nov 2013, 12:46 pm

ಶಹಾಪುರ: ತಾಲೂಕಿನ ಹೊಸಕೇರಾ ಗ್ರಾಮಕ್ಕೆ ಪಡಿತರ ಆಹಾರ ಧಾನ್ಯವನ್ನು ವಿತರಣೆ ಮಾಡಲು ನ್ಯಾಯಬೆಲೆ ಅಂಗಡಿಯ ಪರವಾನಿಗೆಯನ್ನು ಪಡೆದಿರುವ ಮಲ್ಲಣ್ಣ ಈರಣ್ಣ ಸಾಹು ಹೊಸಕೇರಾ ಅವರು ಸರ್ಕಾರದಿಂದ ಬಡ ಜನತೆಗೆ ಸರಬರಾಜು ಮಾಡಲು ಪ್ರತಿ ತಿಂಗಳು ಬರುವ ಪಡಿತರ ಧಾನ್ಯವನ್ನು ಕಾರ್ಡುದಾರರಿಗೆ ನ್ಯಾಯಯುತವಾಗಿ ಹಂಚಿಕೆ ಮಾಡದೆ ತಮ್ಮ ನಿರಂಕುಶ ಪ್ರಭುತ್ವವನ್ನು ತೋರಿದ್ದಾರೆ.
ಸಮಯಕ್ಕೆ ಸರಿಯಾಗಿ ನ್ಯಾಯಬೆಲೆ ಅಂಗಡಿ ತೆರೆಯದೆ ತಮಗೆ ಅನುಕೂಲವಾದಾಗ ತೆರೆಯುತ್ತಾರೆ. ಜನಸಾಮಾನ್ಯರು ಹೊಲಗಳಿಗೆ ಹೋದ ಮೇಲೆ ಒಂದು ಅಥವಾ ಎರಡು ದಿನ ಹಂಚಿಕೆ ಮಾಡಿ ರೇಷನ್ ಮುಗಿದಿದೆ ಎಂದು ಹೇಳುತ್ತಾರೆ. ಅದೇ ರೀತಿ ಕಡ್ಡಾಯವಾಗಿ ಪಾಮ್ ಎಣ್ಣೆ ಪಾಕೇಟನ್ನು ತೆಗೆದುಕೊಳ್ಳದಿದ್ದರೆ ರೇಷನ್ ಕೊಡುವುದಿಲ್ಲ ಎನ್ನುತ್ತಾರೆ. ಹಣಮಂತ್ರಾಯಗೌಡ ಮಾಲಿಪಾಟೀಲ ಮತ್ತು 60ಕ್ಕೂ ಹೆಚ್ಚು ಜನರು ಪಡಿತರ ಅಂಗಡಿ ವಿರುದ್ಧ ಆರೋಪಿಸಿ, ಸೂಕ್ತಕ್ರಮಕ್ಕೆ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಪ್ರತಿ ತಿಂಗಳು ಪಡಿತರ ಧಾನ್ಯವನ್ನು ಆಕ್ರಮವಾಗಿ ಕ್ವಿಂಟಾಲ್‌ಗಟ್ಟಲೆ ಪಡಿತರ ಚೀಟಿ ಇಲ್ಲದವರಿಗೆ ಬೇರೆಯವರಿಗೆ ಮಾರುತ್ತಾರೆ. ಅಲ್ಲದೇ ರೇಷನ್ ಕಾರ್ಡ್‌ಗಳು ಸಮರ್ಪಕವಾಗಿ ಇದ್ದರು ಕೂಡ ಮುಗ್ದ ಜನರಿಗೆ ಈ ರೇಷನ್ ಕಾರ್ಡ್ ಸರಿಯಾಗಿ ಇಲ್ಲವೆಂದು ಹೇಳಿ ಜನರಿಗೆ ವಾಪಾಸು ಕಳುಹಿಸುತ್ತಾರೆ. ತಕ್ಷಣವೇ ಸದರಿ ನ್ಯಾಯಬೆಲೆ ಅಂಗಡಿ ವಿರುದ್ಧ ಕ್ರಮ ಕೈಗೊಳ್ಳಲು ಗ್ರಾಮದವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement