ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಕ್ಕಳು ದೇಶದ ಸದೃಢ ಪ್ರಜೆಗಳು

Mainashree
Updated On : 15 Nov 2013, 12:47 pm

ಸುರಪುರ: ದೇಶದ ಇಂದಿನ ಮಕ್ಕಳೇ ಭವಿಷ್ಯದ ಸದೃಢ ಪ್ರಜೆಗಳು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು. ಇಲ್ಲಿಯ ಕಾಂಗ್ರೆಸ್ ಕಚೇರಿಯಲ್ಲಿ ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಜರುಗಿದ ಪಂ. ನೆಹರು ಜಯಂತಿ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನೆಹರು ಮಕ್ಕಳ ಮೇಲಿಟ್ಟ ಪ್ರೀತಿ, ನಂಬುಗೆಯನ್ನು ಇಂದಿನ ಮಕ್ಕಳು ಕಾಪಾಡಿಕೊಂಡು ಹೋಗಬೇಕಾಗಿದೆ. ಅವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು ನೆಹರು ಕಂಡ ಅಭಿವೃದ್ಧಿ ಭಾರತದ ಕನಸನ್ನು ನನಸಾಗಿಸಬೇಕಾದದ್ದು ಇಂದಿನ ಮಕ್ಕಳ ಕರ್ತವ್ಯ ಎಂದು ಕಿವಿಮಾತು ಹೇಳಿದರು.
ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ, ತಾಪಂ ಅಧ್ಯಕ್ಷ ಶ್ರೀನಿವಾಸ ಪಾಟೀಲ್, ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ವಿ. ಕೆಂಪರಂಗಯ್ಯ, ಸಿಡಿಪಿಒ ದೇನುಸಿಂಗ್ ಚವ್ಹಾಣ, ತಾಪಂ ಸದಸ್ಯರಾದ ಅಂಬ್ರೇಶ ಕೋನಾಳ, ಮಾನಪ್ಪ ಸೂಗೂರು, ತಾಪಂ ಮಾಜಿ ಅಧ್ಯಕ್ಷ ವಿಠ್ಠಲ್ ಯಾದವ್, ಪ್ರಮುಖರಾದ ಸೂಲಪ್ಪ ಕಮತಗಿ, ಸೋಮನಾಥ ಡೊಣ್ಣೆಗೇರಿ, ಅಬ್ದುಲ್ ಗಫಾರ್ ನಗನೂರಿ, ಶಿವರಾಯ ಕಾಡ್ಲೂರು, ಗೋಪಾಲ ಜೇವಗರ್ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮತ್ತು ಶಾಲಾ ಮಕ್ಕಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement