ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ರಕ್ತದಾನದಿಂದ ಜೀವ ಉಳಿಸಿ'

Mainashree
Updated On : 15 Nov 2013, 12:48 pm

ಚಿತ್ತಾಪುರ: ಪ್ರತಿಯೊಬ್ಬರು ರಕ್ತದಾನ ಮಾಡಿದಲ್ಲಿ ಅವರ ಅರೋಗ್ಯ ಕಾಪಾಡಿಕೊಳ್ಳುವದರ ಜೊತೆ ಒಂದು ಜೀವ ಉಳಿಸಿದ ನೆಮ್ಮದಿ ಸಿಗುತ್ತದೆ. ಹೀಗಾಗಿ ಪ್ರತಿಯೊಬ್ಬರು ರಕ್ತದಾನ ಮಾಡಲು ಪಣ ತೋಡಬೇಕೆಂದು ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಹೇಳಿದರು.
ಇಲ್ಲಿಯ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಯುವ ರೆಡ್‌ಕ್ರಾಸ್ ಘಟಕ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರಲ್ಲಿ ಮಾನವೀಯತೆ ಶಾಂತಿ ಸೌಹಾರ್ದತೆ, ಸೇವಾ ಮನೋಭಾವನೆ ಬೆಳೆಸಿಕೊಳ್ಳುವ ಮೂಲಕ ಜನಸೇವೆ ಮಾಡುವುದೇ ಸಂಸ್ಥೆಯ ಉದ್ದೇಶ ಎಂದರು.
ಕಾಲೇಜು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳಸಲು ಪ್ರೇರಣೆ ನೀಡಲು ರೆಡ್‌ಕ್ರಾಸ್ ಸಂಸ್ಥೆಯ ಘಟಕಗಳನ್ನು ಶಾಲಾ ಕಾಲೇಜುಗಳಲ್ಲಿ ಆರಂಭಿಸಲಾಗಿದೆ ಎಂದರು.
ವಿದ್ಯಾರ್ಥಿಗಳು ರೆಡ್‌ಕ್ರಾಸ್ ಸಂಸ್ಥೆ ಉದ್ದೇಶಗಳನ್ನು ತಿಳಿದುಕೊಂಡು ಆರೋಗ್ಯ ನೈರ್ಮಲ್ಯ ವಿಶ್ವ ಬಂಧುತ್ವ, ವಿಶ್ವ ಕುಟುಂಬ ಸಂದೇಶವನ್ನು ಜನತೆಗೆ ತಿಳಿಸಿಕೊಡಬೇಕೆಂದು ಕರೆ ನೀಡಿದರು.
ವಿಶೇಷ ಆಹ್ವಾನಿತರಾಗಿ ಖ್ಯಾತ ವೈದ್ಯ ಮಲ್ಲೆರಾವ ಮಲ್ಲೆ ಮಾತನಾಡಿ, ರಕ್ತದಾನ ಮಾಡುವುದರಿಂದ ಹೃದಯ ಕಾಯಿಲೆ, ಕಾನ್ಸರ್‌ನಂಥ ರೋಗಗಳು ತಡೆಗಟ್ಟಬಹುದು ಎಂದು ಹೇಳಿದರು.
ಡಾ. ಸಂತೋಷ ಪಾಟೀಲ್ ಹೆಬ್ಬಾಳ ಮಾತನಾಡಿದರು. ಪ್ರೊ. ಆರ್.ಕೆ. ಹುಡುಗಿ ಉಪನ್ಯಾಸ ನೀಡಿದರು.
ಕಾಲೇಜು ಪ್ರಾಂಶುಪಾಲ ಡಾ. ಜಯಕುಮಾರ್ ಸಾಲಿಮನಿ ಅಧ್ಯಕ್ಷತೆ ವಹಿಸಿದ್ದರು. ಡಾ. ಶರಣಪ್ಪ ಸೈದಾಪುರ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಚಾಪಲ್ ಪ್ರಾರ್ಥನೆ ಹಾಡಿದರು. ಡಾ. ಸಾವಿತ್ರಿ ಕುಲಕರ್ಣಿ ಸ್ವಾಗತಿಸಿದರು. ಹಣಮಂತ ನಿರೂಪಿಸಿದರು. ಶಿವಯೋಗಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement