ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ವಿದ್ಯೆ ಜೊತೆಗೆ ಆಟಗಳೂ ಮುಖ್ಯ'

Mainashree
Updated On : 15 Nov 2013, 12:46 pm

ಕೆಂಭಾವಿ: ಮಕ್ಕಳಿಗೆ ವಿದ್ಯೆಯ ಜೊತೆಗೆ ಹೊರಾಂಗಣ ಆಟಗಳೂ ಬಹುಮುಖ್ಯ. ಆಟದಿಂದ ಶಿಕ್ಷಣದ ಗುಣಮಟ್ಟ ಕೂಡಾ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಆಟದ ಮೈದಾನದ ಜೊತೆಗೆ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಹೊರ ತರುತ್ತಿದೆ. ಇವುಗಳ ಉಪಯೋಗ ಪಡೆದು ವಿದ್ಯಾಥಿಗಳು ಮುನ್ನಡೆಯಬೇಕು ಎಂದು ಜಿಪಂ ಸದಸ್ಯ ಸಿದ್ದನಗೌಡ ಪೊಲೀಸ್ ಪಾಟೀಲ ಹೇಳಿದರು.
ಪಟ್ಟಣದ ಕನ್ಯಾ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಉದ್ಯೋಗ ಖಾತ್ರಿ ಯೋಜನೆಯಡಿ ಆಟದ ಮೈದಾನ  ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಆರ್‌ಎಂಎಸ್ ಯೋಜನೆಯಡಿ ಕೆಂಭಾವಿ, ನಗನೂರು, ಮಲ್ಲಾ ಶಾಲೆಗಳಲ್ಲಿ ರು. 25 ಲಕ್ಷ ವೆಚ್ಚದಲ್ಲಿ ಶಾಲೆಯ ಹೆಚ್ಚುವರಿ ಕೋಣೆಗಳ ಕಾಮಗಾರಿ ಪ್ರಾರಂಭವಾಗಿದೆ. ಮುಂದಿನ ದಿಗಳಲ್ಲಿ ಈ ಶಾಲೆಗೆ ಕೋಣೆಗಳ ಅಭಾವ ಆಗುವುದಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಶಾಲೆಗಳಲ್ಲಿಯೂ ಹೂ ದೋಟ, ಉದ್ಯಾನ ವನ ನಿರ್ಮಾಣ ಮಾಡಬೇಕು. ಇದರಿಂದ ಶಾಲೆಯ ಅಂದ ಹೆಚ್ಚುವುದರ ಜೊತೆಗೆ ವಿದ್ಯಾರ್ಥಿಗಳ ಮನಸ್ಸನ್ನು ಶಾಲೆಯತ್ತ ಸೆಳೆಯಬಹುದು.
ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆಟದ ಮೈದಾನದ ಕೊರತೆ ಇದ್ದು, ಈಗ ಉದ್ಯೋಗ ಖಾತ್ರಿ ಯೋಜನೆಯಡಿ ಆಟದ ಮೈದಾನಗಳನ್ನು ನಿರ್ಮಾಣ ಮಾಡಿಕೊಳ್ಳಬಹುದು. ಇದರಿಂದ ಗ್ರಾಮೀಣ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ವಿಕಾಸಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ಪದ್ಮಾವತಿ ಬಾಬು ದೇವರಮನಿ ಗುದ್ದಲಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಉಪಾಧ್ಯಕ್ಷ ಮಹಿಪಾಲ ರಡ್ಡಿ ಡಿಗ್ಗಾವಿ, ಸಂಜೀವರಾವ ಕುಲಕರ್ಣಿ ಗ್ರಾಪಂ ಸದಸ್ಯ ಶಿವಶಂಕರ ಖಾನಾಪುರ, ರಂಗಪ್ಪ ವಡ್ಡರ, ಮುಖ್ಯಗುರು ಅನೀಲ ಕುಮಾರ, ನಿಂಗನಗೌಡ, ಸೂಗಯ್ಯ ಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement