ಸಂಭ್ರಮದ ಮೊಹರಂ ಮೆರವಣಿಗೆ ಆಚರಣೆ
ಶಹಾಪುರ: ಪಟ್ಟಣದ ದಿಗ್ಗಿಬೇಸ್ ವಾರ್ಡ್ ನಂ. 6ರಲ್ಲಿ ಬರುವ ಬಡಾವಣೆಯಲ್ಲಿ ಸಂಭ್ರಮದ ಮೊಹರಂ ಆಚರಣೆಯಲ್ಲಿ ಅಲಾಯಿ ಇಮಾಂ ಖಾಸಿಂ ಪೀರಾ (ದೇವರ) ಮೆರವಣಿಗೆ ನಡೆಯಿತು.
ಪ್ರತಿ ವರ್ಷದಂತೆ ಮುಸ್ಲಿಂ ಬಾಂಧವರು ಬಹುಕಾಲದಿಂದ ಇಮಾಂ ಖಾಸಿಂ ಪೀರಾನನ್ನು ಪ್ರತಿಷ್ಟಾಪಿಸಿ ಶ್ರದ್ಧೆ ಭಕ್ತಿಯಿಂದ ಭಾಗವಹಿಸುತ್ತಾರೆ. ಪೀರಾನಿಗೆ ಬಗೆ ಬಗೆಯ ಹೂಗಳನ್ನು ಶೃಂಗರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಭಕ್ತರು ಹೂ ಸಕ್ಕರೆಯನ್ನು ನೈವೇದ್ಯವಾಗಿ ಅರ್ಪಿಸಿದರು.
ಮೆರವಣಿಗೆಯಲ್ಲಿ ಧರ್ಮಕಾರ್ಯ ಮಾಡುವ ಮುಜಾವರ ಅಬ್ದುಲ್ವಾಹಬ್, ಸೈಯದ್ ಜಾಫರ್ ಪಟೇಲ, ಪರಸಭು ಸದಸ್ಯೆಯಾದ ಲಲಿತಾ ಮಹಾದೇವಯ್ಯ ಸ್ವಾಮಿ, ಬಾಬಾ ಮತ್ತೆ, ಎಸ್.ಎನ್. ಖಾದ್ರಿ ಮುಂತಾದವರು ಭಾಗವಹಿಸಿದ್ದರು.