ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅನ್ನ, ವಸ್ತ್ರ, ಜ್ಞಾನ ದೇವರಿಗೆ ಸಲ್ಲಿಸುವ ಅಭಿಷೇಕಕ್ಕಿಂತ ಶ್ರೇಷ್ಠ

Rashmi Kasaragodu
Updated On : 16 Nov 2013, 11:57 am

ಹುಣಸಗಿ: ನಾವು ಮಕ್ಕಳಿಗೆ ನೀಡುವ ಊಟ ದೇವರಿಗೆ ಅರ್ಪಿಸುವ ನೈವೇದ್ಯದಂತೆ, ಮಕ್ಕಳಿಗೆ ನೀಡುವ ಅನ್ನ ವಸ್ತ್ರ, ಜ್ಞಾನ ದೇವರಿಗೆ ಸಲ್ಲಿಸುವ ಅಭಿಷೇಕಕ್ಕಿಂತ ಶ್ರೇಷ್ಠ ಎಂದು ಕುಸುಮಾವತಿ ಬಿರಾದಾರ ಅಭಿಪ್ರಾಯ ವ್ಯಕ್ತಪಡಿಸಿದರು.
  ಹುಣಸಗಿ ಸಮೀಪದ ಕಲ್ಲದೇವನಹಳ್ಳಿಯ ಖಾಸ್ಗತೇಶ್ವರ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ದೇವರು ಇರುವುದು ದೇವಸ್ಥಾನ, ಮಸೀದಿ, ಚರ್ಚ್ಗಳಲ್ಲಿ. ಇಲ್ಲಿ ಜೀವಂತ ಮಕ್ಕಳೇ ದೇವತೆಗಳ ರೂಪದಲ್ಲಿದ್ದಾರೆ. ಅವರಿಗೆ ಸುಜ್ಞಾನ ನೀಡುವದೇ ನಿಜವಾದ ದೇವರ ಸೇವೆ ಎಂದು ನುಡಿದರು.
  ಸಂಸ್ಥೆಯ ಕಾರ್ಯದರ್ಶಿ ಅಮರಯ್ಯ ಸ್ವಾಮಿ ಜಾಲಿಬೆಂಚಿ ಮಾತನಾಡಿ, ಮಕ್ಕಳ ಮನಸ್ಸು ಬಿಳಿಹಾಳೆ ಇದ್ದಂತೆ. ನಾವು ಏನು ಬರೆದರೂ ಅದು ಮೂಡುತ್ತದೆ. ಅದಕ್ಕಾಗಿ ಸುಂದರ ಚಿತ್ರ ಬಿಡಿಸಬೇಕು. ಮಕ್ಕಳಿಗೆ ಸ್ಫರ್ಧಾತ್ಮಕ ಜ್ಞಾನದ ಕುರಿತು ಆತ್ಮವಿಶ್ವಾಸ ತುಂಬಬೇಕು. ಈ ದಿಸೆಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಬಾಲಕಿಯರ ಶಾಲೆ: ಹುಣಸಗಿಯ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಶಾಲೆಯ ಪ್ರಧಾನ ಗುರುಗಳಾದ ಅಮೃತಬಾಯಿ ಜಹಗೀರದಾರ ನೆಹರು ಕುರಿತು ಮಾತನಾಡಿದರು. ವೇದಿಕೆಯ ಮೇಲೆ ಮಕ್ಕಳೇ ಅಧ್ಯಕ್ಷ, ಅತಿಥಿಗಳಾಗಿ ಪಾಲ್ಗೊಂಡಿದ್ದರು.
  ಎಸ್ಡಿಎಂಸಿ ಅಧ್ಯಕ್ಷ ವಿರೇಶ ಚಿಂಚೋಳಿ ಮಕ್ಕಳಿಗೆ ಶುಭಕೊರಿದರು. ಅಧ್ಯಕ್ಷತೆಯನ್ನು ಸಂಕಲ್ಪ ವಹಿಸಿದ್ದರು. ವಿಶಾಲಾಕ್ಷಿ ಮಠ, ಅಕ್ಷತಾ, ವಿದ್ಯಾಶ್ರೀ, ಸಂಧ್ಯಾ ವೇದಿಕೆ ಮೇಲೆ ಇದ್ದರು. ನಾಗನಗೌಡ ಪಾಟೀಲ ಸ್ವಾಗತಿಸಿ,  ಸುಮಂಗಲಾ ನೂಲಿ ವಂದಿಸಿದರು. ವಿಜಯಲಕ್ಷ್ಮಿ ಕುಂಬಾರ ನಿರೂಪಿಸಿದರು.
ಗುರುಮಠಕಲ್ ಕಾಲೇಜಲ್ಲಿ: ಪಟ್ಟಣದ ಸರ್ಕಾರಿ ಪಪೂ ಕಾಲೇಜು (ಪ್ರೌಢವಿಭಾಗದಲ್ಲಿ) ವಿಷೇಶವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳೇ ಕಾರ್ಯಕ್ರಮದ ಅಧ್ಯಕ್ಷತೆ, ಅತಿಥಿ ಸ್ಥಾನಗಳನ್ನು ವಹಿಸಿ ವಿನೂತನವಾಗಿ ನೆರೆವೇರಿಸಲಾಯಿತು.
  ಕಾರ್ಯಕ್ರಮವನ್ನುದ್ದೇಶಿಸಿ ಹುಸೇನಪ್ಪ ಸಕ್ರಿ ಮಾತನಾಡಿದರು.ಕು.ನವೀನಾ ಅಧ್ಯಕ್ಷತೆ, ವಿರೇಶ, ಖಾಸಿಂ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ್ದರು.ಪ್ರ.ಉಪ ಪ್ರಾಚಾರ್ಯ ಶರಣಪ್ಪ ಪಾಟೀಲ್, ಸ.ಶಿ, ಕೃಷ್ಣರೆಡ್ಡಿ, ಮಸಿಯುದ್ದೀನ್, ಶರಣಪ್ಪ ಭೂಮಾ, ಗೀತಾ, ವಿಜಯಲಕ್ಷ್ಮೀ, ಛಾಯಾ ಪಾಟೀಲ, ಶಿಕ್ಷಕ ವೃಂದ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement