ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೊಲ್ಲೂರಲ್ಲಿ ಭಾವೈಕ್ಯತೆಯ ಮೊಹರಂ

Rashmi Kasaragodu
Updated On : 16 Nov 2013, 11:46 am

ಗುಲ್ಬರ್ಗ/ಶಹಾಬಾದ್: ಕೊಲ್ಲೂರ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಹಿಂದೂ, ಮುಸ್ಲಿಂ ಭಾವೈಕ್ಯತೆಯೊಂದಿಗೆ ಐದು ಅಡಿ ಉದ್ದದ ಬೆಂಕಿಯ ಕೆಂಡವನ್ನು ಹಾಯುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮದಲ್ಲಿ ಮೊಹರಂ ನಿಮಿತ್ತ ಇಮಾಮ್ ಕಾಶೀಮ್, ಹಸೇನ್ ಹುಸೇನ್, ಹಳ್ಳಿಪೀರ್, ರಾಜಾಬಕ್ಷರ್ ದೇವರುಗಳನ್ನು ವಿವಿಧೆಡೆ ಪ್ರತಿಷ್ಠಾಪಿಸಿದ್ದರು. ಮುಖ್ಯ ದೇವರಾದ ರಾಜಾ ಬಕ್ಷರ್ ದೇವರನ್ನು ತಲೆತಲಾಂತರದಿಂದ ಹಿಡಿಯುವ ಮಲ್ಲಪ್ಪ ಅಂಬಿಗೇರ್ ಬೆಂಕಿ ಕೆಂಡವನ್ನು ತುಳಿದರು. ಮೊಹರಂ ದೇವರಿಗೆ ರಾಚಯ್ಯಸ್ವಾಮಿ ನಪೂರೆ ವಿಶೇಷ ಅಲಂಕಾರ ನೆರವೇರಿಸಿದರು. ಮಾಲಿಗೌಡರ ಮನೆಯಿಂದ ನೈವೇದ್ಯ ಅರ್ಪಣೆ ನಡೆಯಿತು. ಶರಣಗೌಡ ಕರಡ್ಡಿ, ಚೆನ್ನಪ್ಪಗೌಡ ಮಾಪಾ, ಆದಿತ್ಯಗೌಡ, ನಾಗರಾಜ ಸಾಹು ಇಂಗಳಗಿ, ರಾಜಶೇಖರ ಅಂಬಿಗೇರ, ನವಾಬ್ ಬಡಿಗೇರ್, ಗೈಯುಬ್ ದಿಡ್ಡಿಮನಿ, ಸಾಬಣ್ಣ ಮಾರಡಗಿ, ವಿಶ್ವನಾಥ ನಾಯ್ಕೋಡಿ, ಸಿದ್ದಲಿಂಗಪ್ಪ ನಾಟೇಕಾರ್, ರೇಣುಕಾ ಎಲ್ಲಮ್ಮ, ರಾಜಪ್ಪ ತಳವಾರ, ರವಿ ವಗ್ಗರ್, ರಾಜು, ರಾಜಪ್ಪ ಅಂಬಿಗೇರ ಮತ್ತಿತರರು ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement