ಗೋಗಿ ಆಟದ ಮೈದಾನ ಕಾಮಗಾರಿಗೆ ಚಾಲನೆ
ಶಹಾಪುರ:ಮಹಾತ್ಮಗಾಂಧೀ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿಯಲ್ಲಿ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಪಂಚಾಯತಿಗೊಂದು ಆಟದ ಮೈದಾನದ ಕಾರ್ಯಕ್ರಮದಡಿ ತಾಲೂಕಿನ ಗೋಗಿ(ಕೆ) ಗ್ರಾಮ ಪಂಚಾಯ್ತಿ ಸರ್ಕಾರಿ ಉರ್ದು ಪ್ರೌಢಶಾಲೆ ಆವರಣದಲ್ಲಿ ಮೈದಾನದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಗೋಗಿ.ಕೆ. ತಾ.ಪಂ ಸದಸ್ಯರಾದ ಚಂದಪ್ಪ ಸಿತನಿ ಮತ್ತು ಗ್ರಾ.ಪಂ ಅಧ್ಯಕ್ಷೆ ಜ್ಯೋತಿ ಭೀಮರಾಯ ಕಾಮಗಾರಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ನರಸಿಂಗ್ರಾವ್ ಮುತಾಲಿಕ್ ಪೂಜೆ ನೆರವೇರಿಸಿ, ಸರ್ಕಾರದ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಸಾಕಾರವಾದಾಗ ಮಾತ್ರ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರು.
ಗೋಗಿ(ಕೆ) ಗ್ರಾಪಂ ಅಧ್ಯಕ್ಷೆ ಸಹನಾ ರಾಜಶೇಖರ ಸಗರ, ಸದಸ್ಯರಾದ ವಿಜಯರಡ್ಡಿ ಕೋಟೆನೂರ, ಚಾಂದಬೀ ಚೌದ್ರಿ, ನಾಗಪ್ಪ ಜರಬಂಡಿ, ರಾಜಶೇಖರ ಸಗರ, ಶಿವರಾಜ ಪತಂಗೆ, ಚಂದ್ರಶೇಖರ ಬೇನಾಳ, ಮುಖ್ಯಗುರು ಪುತ್ರಪ್ಪಗೌಡ ಮತ್ತು ಶಾಲಾ ಸಿಬ್ಬಂದಿ ಇದ್ದರು.