ದಿ.ಬಾಪುಗೌಡ ಹೈ.ಕ ಭಾಗದ ಶಕ್ತಿ: ಶಾಸಕ
ಶಹಾಪುರ: ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಆದರ್ಶ ಪ್ರಾಯರಾಗಿ ದಿಟ್ಟತನದ ಹೋರಾಟಗಳ ಮೂಲಕ ದಿ. ಬಾಪುಗೌಡ ದರ್ಶನಾಪುರ ಅವರು ಕೇವಲ ವ್ಯೆಕ್ತಿಯಾಗಿರದೆ ಹೈ-ಕ ಭಾಗದ ಒಂದು ದೊಡ್ಡ ಶಕ್ತಿಯಾಗಿದ್ದರೆಂದು ಚಿಂಚೋಳಿ ಮತಕ್ಷೇತ್ರದ ಶಾಸಕ ಡಾ. ಉಮೇಶ ಜಾಧವ ತಿಳಿಸಿದರು. ಪಟ್ಟಣದ ಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ದಿ. ಬಾಪುಗೌಡ ದರ್ಶನಾಪುರ ಅವರ 25ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವೇದಮೂರ್ತಿ ಬಸವಯ್ಯ ಶರಣರು ಸಾನ್ನಿಧ್ಯ ವಹಿಸಿದ್ದರು. ಬಸವರಾಜಪ್ಪಗೌಡ, ಶರಣಬಸಪ್ಪಗೌಡ ದರ್ಶನಾಪುರ, ಶ್ರೀನಿವಾಸರಾವ, ವೆಂಕಟಪ್ಪನಾಯಕ, ಮರಿಗೌಡ, ಗುರುನಾಥ ರೆಡ್ಡಿ ಪಾಟೀಲ ಮತ್ತಿತರರು ಇದ್ದರು.