ದೋರನಹಳ್ಳಿ ಮಹಾಂತೇಶ್ವರ ಜಾತ್ರೆ ಪೂರ್ವಸಭೆ
ಶಹಾಪುರ: ತಾಲೂಕಿನ ಸುಕ್ಷೇತ್ರ ದೋರನಹಳ್ಳಿಯ ಬೆಟ್ಟದ ಮಹಾಂತೇಶ್ವರರ ಜಾತ್ರೆಯು ಪ್ರತಿವರ್ಷದಂತೆ ಅದ್ಧೂರಿಯಾಗಿ ನೆರವೇರಿಸಲು ಪೂರ್ವಭಾವಿ ಸಿದ್ಧತೆ ಸಭೆಯನ್ನು ವೀರಮಹಾಂತೇಶ್ವರರ ಸಾನ್ನಿಧ್ಯದಲ್ಲಿ ನಡೆಸಲಾಯಿತು.
ಸಭೆಯಲ್ಲಿ ರಾಯಪ್ಪಗೌಡ ದರ್ಶನಾಪುರ ಮಾತನಾಡಿ ಜಾತ್ರೆಯ ವಿಶೇಷವಾದ ಸಾಮೂಹಿಕ ಮದುವೆ ಸಮಾರಂಭವನ್ನು ಅದ್ಧೂರಿಯಾಗಿ ನೆರವರಿಸಿಕೊಂಡು ಬರುತ್ತಿದ್ದು, ಇದರಿಂದ ತಾಲೂಕಿನ ಅನೇಕ ಕುಟುಂಬಗಳು ಸಾಮೂಹಿಕ ಮದುವೆಯ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಇದನ್ನು ಮುಂದುವರಿಸಿಕೊಂಡು ಹೋಗಲು ಸಹಕಾರ ಅಗತ್ಯ ಎಂದು ಶರಣಭೂಪಾಲರೆಡ್ಡಿ ಅಭಿಪ್ರಾಯಪಟ್ಟರು. 27.02.2014ರ ಗುರುವಾರ ಬೆಳಿಗ್ಗೆ 11 ಕ್ಕೆ ಸಾಮೂಹಿಕ ಮದುವೆ ರಂಭಾಪುರಿಪೀಠದ ಜಗದ್ಗುರುಗಳ ಸಮ್ಮುಖದಲ್ಲಿ ಮತ್ತು ಮಹಾಂತಶ್ರೀ ಪ್ರಶಸ್ತಿ ಪ್ರಧಾನ ನಡೆಯುವುದು.