ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಾಲಿಕೆ ಮಾಜಿ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ

Rashmi Kasaragodu
Updated On : 16 Nov 2013, 11:46 am

ಗುಲ್ಬರ್ಗ: ಇಲ್ಲಿನ ಜೇವರ್ಗಿ ಕ್ರಾಸ್ ಹತ್ತಿರದ ಬಸ್ ಡೀಪೋ ಮುಂಭಾಗದ ರಸ್ತೆಯಲ್ಲಿ ಶುಕ್ರವಾರ ಪಾಲಿಕೆ ಮಾಜಿ ಸದಸ್ಯ ವಿಜಯಕುಮಾರ್ ಪರಾಂಜಪೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ದುಷ್ಕರ್ಮಿಗಳ ಗುಂಪೊಂದು  ಇವರನ್ನು ಸುತ್ತುವರಿದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ಹಲ್ಲೆಗೊಳಗಾದ ವಿಜಯ ಪರಾಂಜಪೆ ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಜಯ ಪರಾಂಜಪೆ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದರು. ಇತ್ತೀಚೆಗಷ್ಟೇ ಜಾಮೀನು ಮೇಲೆ ಹೊರಗಡೆ ಬಂದಿದ್ದರು.
ಜೀಪು ಪಲ್ಟಿ: 7 ಜನರಿಗೆ ಗಾಯ
ಗುಲ್ಬರ್ಗ: ತಾಲೂಕಿನ ಕಾಳಮಂದಿರಗಿ ಹತ್ತಿರದಲ್ಲಿ ಜೀಪೊಂದು ಪಲ್ಟಿಯಾಗಿ ಅದರಲ್ಲಿದ್ದ 7 ಜನರಿಗೆ ಗಾಯಗಳಾಗಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಗಾಯಾಳುಗಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕಮಲಾಪುರ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾಲ್ವರು ಕಳ್ಳರ ಬಂಧನ
ಗುಲ್ಬರ್ಗ: ಟಂಟಂ ಟ್ರ್ಯಾಲಿಯಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ 150 ಹಣ ಸ್ವೀಕರಿಸುವ ಪ್ರಿಂಟೆಡ್ ಪುಸ್ತಕ, 40 ಗೇಟ್ ಪಾಸ್ ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಸಂತ್ರಾಸವಾಡಿಯ ಸಾತ್ ಗುಂಬಜ್ ಹತ್ತಿರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬ್ರಹ್ಮಪುರ ಠಾಣೆಯ ಎಎಸ್ಐ ಮಾರುತಿ, ಅಪರಾಧ ವಿಭಾಗದ ಸಿಬ್ಬಂದಿ ಪ್ರಕಾಶ, ಶಿವಲಿಂಗಪ್ಪ, ಉದಯಕುಮಾರ್ ಅವರು ದಾಳಿ ನಡೆಸಿ ಮಿಜುಗುರಿ ಬಡಾವಣೆಯ ಅವೇಜ್ ಗೋರೆಬಾಯಿ, ಬಾಪು ನಗರದ ಅಗ್ನಿರಾಮು ಕಾಳೆ, ಸಿದ್ರಾಮ ಉಪಾಧ್ಯಾಯ, ಸಂತ್ರಾಸವಾಡಿಯ ನಜೀರ್ ಅಹ್ಮದ್ ತಂದೆ ಅಜೀಜ್ ಉರ್ ರೆಹಮಾನ್ ಎಂಬುವರನ್ನು ಬಂಧಿಸಿದ್ದಾರೆ.
ಪೇದೆ ಕೊರಳ ಸರವನ್ನೇ ದೋಚಿದ ಕಳ್ಳರು!
ಗುಲ್ಬರ್ಗ: ಪೇದೆಯೊಬ್ಬರು ಬಸ್ಸಿನಿಂದ ಇಳಿಯುತ್ತಿದ್ದ ವೇಳೆ ಅವರ ಕೊರಳಲ್ಲಿನ 35 ಸಾವಿರ ಮೌಲ್ಯದ 15 ಗ್ರಾಂ ಚಿನ್ನದ ಸರ ಕಳವಾದ ಘಟನೆ ನಡೆದಿದೆ. ನರೋಣಾ ಠಾಣೆಯ ಮಹಿಳಾ ಪೇದೆ ಕವಿತಾ ಚವ್ಹಾಣ ಅವರ ಚಿನ್ನದ ಸರ ಕಳವಾಗಿದೆ. ಇವರು ನರೋಣಾದಿಂದ ಗುಲ್ಬರ್ಗಕ್ಕೆ ಬಸ್ನಲ್ಲಿ ಬಂದು ಬಸ್ಸು ಇಳಿಯುತ್ತಿದ್ದ ವೇಳೆ ಚಿನ್ನದ ಸರ ಕಳವಾಗಿದೆ. ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement