ಮೊಹರಂ ಭಾವೈಕ್ಯತೆ ಸಂಕೇತ
ಗುರುಮಠಕಲ್: ಯಾದಗಿರಿಯ ಗುರುಮಠಕಲ್ ಪಟ್ಟಣದಲ್ಲಿ ಮೊಹರಂನಲ್ಲಿ ಪುರುಷರ ಕುಣಿಯುವ ಅಲಾಯಿ, ಮಹಿಳೆಯರು ಆಡುವುದು ಬೊಡ್ಡೆಮ್ ಕಂಡು ಬಂದಿತು. ಪುರುಷರಲ್ಲಾ ಗುಂಪು ಗುಂಪಾಗಿ ಒಗ್ಗೂಡಿ ಕೈಯಲ್ಲಿ ಕಟ್ಟಿಗೆಗಳನ್ನು ಹಿಡುದು ಸಂಭ್ರಮಿಸಿದರೆ, ಮಹಿಳೆಯರು ಗುಂಪು ಕಟ್ಟಿ ಕುಣಿದು ಕುಪ್ಪಳಿಸಿದರು.
ಅಲಂ ದಫನ್ ಕೊನೆಯ ದಿನವಾದ ಇಂದು ಚಾನಸಾಬ್ ನಾಲಸಾಬ್ ಮೆರವಣಿಗೆ ಮಾಡುವುದರೊಂದಿಗೆ ಪಟ್ಟಣದ ಸಿಹಿ ನೀರ ಬಾವಿ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನರು ಉಲ್ಲಾಸದಿಂದ ಕುಣಿದು ಮುಖ್ಯಬೀದಿಗಳ ಮೂಲಕ ಗಡಿಯಲ್ಲಿರುವ ಹದ್ರಕಲಾಲ ಅಲಂ ಮಸೀದಿಗೆ ಹೋಗಿ ದಫನ್ಗೊಂಡವು. ವಿಷೇಶವಾಗಿ ಇಲ್ಲಿನ ಪ್ರಸಿದ್ಧ ನಬಿಸಾಬ್ ಬಂದೇನವಾಜ್ ಪೀರ್ಗಳ ದಫನ್ ರಾತ್ರಿ ನಡೆಯಲಿದ್ದು, ಬಿಡಕಿ ಕಟ್ಟಾದಲ್ಲಿ ಹೆಚ್ಚು ಜನರು ಸೇರಿ ಸಂಭ್ರಮಿಸಿದರು.