ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸೇಂಟ್ ಥಾಮಸ್ ಚರ್ಚ್ ಸುವರ್ಣಹಬ್ಬ ಇಂದಿನಿಂದ

Rashmi Kasaragodu
Updated On : 16 Nov 2013, 11:45 am

ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದ ಲಕ್ಷ್ಮೀ ಗಂಜ್ ಪ್ರದೇಶದಲ್ಲಿರುವ ಸೇಂಟ್ ಥಾಮಸ್ ಚರ್ಚ್ನ ಸುವರ್ಣ ಮಹೋತ್ಸವ ಹಬ್ಬ ನ. 16 ಮತ್ತು 17 ರಂದು ಎರಡು ದಿನ ನಡೆಯಲಿದೆ.
ನ.16ಕ್ಕೆ ಸಂಜೆ ಸರ್ವಧರ್ಮ ಸಮ್ಮೇಳನದಲ್ಲಿ ರೆವರೆಂಡ್ ಡಾ. ರಾಬರ್ಟ್ ಮೈಕಲ್ ಮಿರಾಂಡಾ, ಫಾದರ್ ಸಂತೋಷ ಡಾಯಸ್, ಶಹಾಬಾದ್ನ ಮಹ್ಮದ್ ಮುಫ್ತಿ ಮಹ್ಮದ್ ಅಲಿ,  ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು, ಬಂತೇಜಿ ಸಂಘಪಾಲ್, ಫಾದರ್ ಅನೀಲ್ ಪ್ರಸಾದ, ಮಾಜಿ ಸಚಿವ ಸಿ. ಗುರುನಾಥ, ನಗರಸಭೆ ಅಧ್ಯಕ್ಷ ಗಿರೀಶ ಕಂಬಾನೂರ, ಡಾ.ಎಂ.ಎ.ರಶೀದ್ ಮರ್ಚಂಟ್, ಶಾಂತರೆಡ್ಡಿ ದಂಡಗುಲಕರ್, ಉದ್ಯಮಿ ಸಂತೋಷ ಇಂಗಿನಶೆಟ್ಟಿ ಭಾಗವಹಿಸುವರು.  ನ.17ಕ್ಕೆ ನೂತನ ಚರ್ಚ್ ಕಟ್ಟಡಕ್ಕೆ ಶಂಕುಸ್ಥಾಪನೆ ನಡೆಯಲಿದೆ. ಜೆ.ಪಿ. ಸಿಮೆಂಟ್ ಕಾರ್ಖಾನೆಯ ಉಪಾಧ್ಯಕ್ಷ ಮಂಜುನಾಥ ಪ್ರಭು, ಸ್ಟೇನ್ಲೆ ಲೋಬೋ, ಸುನೀಲ್ ಅಂದ್ರಾಡೆ, ಚಾರ್ಲ್ಸ್ ಡಿಸೋಜಾ, ಪೌಲ್ ಫರ್ನಾಂಡಿಸ್, ಸೇಂಟ್ ಥಾಮಸ್ ಚರ್ಚ್ ಸುವರ್ಣ ಸಮಾರಂಭ ಸಮಿತಿ ಅಧ್ಯಕ್ಷ ಫಾದರ್ ಸಾಲವಡಾರ್ ಫರ್ನಾಂಡಿಸ್,  ಆಂಟೋನಿ ಪ್ಯಾಟ್ರಿಕ್ ಇತರ ಗಣ್ಯರು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement