ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

2000 ಕೋಟಿ ವೆಚ್ಚದಲ್ಲಿ ಸಂಗಾರೆಡ್ಡಿ- ಭಾಲ್ಕಿವರೆಗಿನ ರಸ್ತೆ ಅಭಿವೃದ್ಧಿಗೆ ಹಣ ಮಂಜೂರು

Mainashree
Updated On : 18 Nov 2013, 11:06 am

ಕನ್ನಡಪ್ರಭ ವಾರ್ತೆ  ಚಿಂಚೋಳಿ  ನ.17
ಅಂತರ ರಾಜ್ಯ ರಸ್ತೆ ಸಂಪರ್ಕ ಯೋಜನೆಯಡಿ ಆಂಧ್ರದ ಸಂಗಾರೆಡ್ಡಿ ಜಿಲ್ಲೆಯಿಂದ ಬೀದರಿನ ಭಾಲ್ಕಿ ತಾಲೂಕಿನವರೆಗೆ ಉತ್ತಮ ರಸ್ತೆ ನಿರ್ಮಾಣಕ್ಕಾಗಿ 2000 ಕೋಟಿ ಮಂಜೂರಾಗಿದೆ. ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಬೀದರ್ ಸಂಸದ, ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ತಿಳಿಸಿದರು.
ತಾಲೂಕಿನ ಅಣವಾರ ಗ್ರಾಮದಲ್ಲಿ 2011-12ನೇ ಸಾಲಿನ ಸಂಸದರ ನಿಧಿಯಿಂದ 7 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಸಾಂಸ್ಕ ೃತಿಕ ಭವನ ಉದ್ಘಾಟಿಸಿ ಅವರು ಮಾತನಾಡಿದರು.
ಬೀದರ್ ಸಂಸದರಾಗಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಆಂಧ್ರದ  ಸಂಗಾರೆಡ್ಡಿ ಜಿಲ್ಲೆಯಿಂದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನವರೆಗೆ ರಸ್ತೆ ಸಂಪರ್ಕಕ್ಕಾಗಿ ಹೊಸದಾಗಿ ರಸ್ತೆ ಮಂಜೂರಿಗೆ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ರಸ್ತೆ ಯೋಜನೆ ಮಂಜೂರಾಗಿದ್ದು, ಕೂಡಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಚಿಂಚೋಳಿ ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಸಿಆರ್‌ಎಫ್ ಯೋಜನೆಯಡಿ 20 ಕೋಟಿ ನೀಡಿ ಮಿರಿಯಾಣ-ಚಿಂಚೋಳಿ ರಸ್ತೆ ಡಾಂಬರೀಕರಣಗೊಳಿಸಲಾಗಿದೆ. ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಜನರಿಗೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.
ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ 40 ವರ್ಷಗಳಿಂದ ನಡೆಸುತ್ತಿರುವ ಹೋರಾಟದ ಫಲವಾಗಿ ಸಂವಿಧಾನದ 371ನೇ ಕಲಂ ಜಾರಿಗೆ ಬಂದಿದೆ. ಎಲ್ಲ ಹೋರಾಟದಿಂದ ನಮಗೆ ಜಯ ಸಿಕ್ಕಿದೆ. ಹಿಂದುಳಿದ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಡಾ.ಉಮೇಶ ಜಾಧವ, ಮಾಜಿ ಶಾಸಕ ಎಂ.ವೀರಯ್ಯಸ್ವಾಮಿ, ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್ ಮುಂತಾದವರು ಮಾತನಾಡಿದರು.
ಪಪಂ ಉಪಾಧ್ಯಕ್ಷ ಶಾಮರಾವ್ ಕೊರವಿ, ಜಿಪಂ ಸದಸ್ಯ ದೀಪಕನಾಗ ಪುಣೈಶೆಟ್ಟಿ, ರೇವಣಸಿದ್ದಪ್ಪ ಮಾಸ್ಟರ್, ಮಾಜಿ ಉಪಾಧ್ಯಕ್ಷೆ ಜಯಶ್ರೀ ಸಜ್ಜನಶೆಟ್ಟಿ, ತಾಪಂ ಮಾಜಿ ಅಧ್ಯಕ್ಷ ವೀರಮ್ಮ ಸ್ವಾಮಿ, ಜಿಪಂ ಸದಸ್ಯೆ ಮಂದಾಕಿನಿ ನಿಷ್ಟಿ, ವೀರಶೆಟ್ಟಿ ಪಾಟೀಲ್, ಸುಭಾಷ ಗಂಗನಪಳ್ಳಿ, ಇಸ್ಮಾಯಿಲ್ ಪಟೇಲ್, ಕೆ.ಎಂ.ಬಾರಿ, ಜಗದೀಶ ಸಿಂಗ್ ಠಾಕೂರ, ಶಿವನಾಗಯ್ಯ ಸ್ವಾಮಿ, ರಾಜು ನವಲೆ, ಅಬ್ದುಲ್ ಬಾಸಿತ್ ಇತರರು ಉಪಸ್ಥಿತರಿದ್ದರು.
ಕರುಣೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಗಯ್ಯ ಸ್ವಾಮಿ ಸ್ವಾಗತಿಸಿದರು. ಬಸವರಾಜ ಗೇಣಿ  ನಿರೂಪಿಸಿ, ನಾಗೀಂದ್ರಪ್ಪ ಬಿರಾದಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement